ನವದೆಹಲಿ:ದೇಶದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ವ್ಯವಹಾರಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಮಾರಕ ಮತ್ತು ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದ ಕಾರಣಕ್ಕಾಗಿ ಪಾಕಿಸ್ತಾನ ಮೂಲದ ಒಂದು ಸೇರಿದಂತೆ 8 ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಆದೇಶಿಸಿದೆ.
ಮಾಹಿತಿ ತಂತ್ರಜ್ಞಾನ ನಿಯಮ -2021 ರ ಅನುಸಾರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ 7 ಸ್ವದೇಶಿ ಮತ್ತು ಪಾಕಿಸ್ತಾನದ ಒಂದು ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಿದೆ.
ನಿರ್ಬಂಧಿಸಲಾದ ಯೂಟ್ಯೂಬ್ ಸುದ್ದಿ ಚಾನಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳು ಮತ್ತು 85.73 ಲಕ್ಷ ಚಂದಾದಾರರನ್ನು ಹೊಂದಿದ್ದವು. ಇವು ಭಾರತ ವಿರೋಧಿ ಮಾಹಿತಿಯನ್ನು ಪ್ರಸಾರ ಮಾಡಿ ಹಣ ಗಳಿಕೆ ಮಾಡುತ್ತಿದ್ದವು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಹಿಂದೆ ಏಪ್ರಿಲ್ 25 ರಂದು ರಾಷ್ಟ್ರೀಯ ಭದ್ರತೆ, ವಿದೇಶಿ ವ್ಯವಹಾರ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಎರವಾಗಿದ್ದ 10 ದೇಶೀಯ ಮತ್ತು ಪಾಕಿಸ್ತಾನ ಮೂಲದ 6 ಸೇರಿದಂತೆ 16 ಯೂಟ್ಯೂಬ್ ಸುದ್ದಿ ಚಾನೆಲ್ ಬ್ಯಾನ್ ಮಾಡಲಾಗಿತ್ತು.
ಓದಿಹಿಜಾಬ್ ವಿವಾದದ ಬಳಿಕ ಮಂಗಳೂರು ವಿವಿ ಕಾಲೇಜಿಗೆ 10 ಮುಸ್ಲಿಂ ವಿದ್ಯಾರ್ಥಿನಿಯರ ಸೇರ್ಪಡೆ