ಲತೇಹಾರ್(ಜಾರ್ಖಂಡ್):ಕರ್ಮ ವಿಸರ್ಜನೆ(ಸಾಂಪ್ರದಾಯಿಕ ಹಬ್ಬ ಆಚರಣೆ) ಸಮಯದಲ್ಲಿ ನೀರಿನಲ್ಲಿ ಮುಳುಗಿ ಏಳು ಅಪ್ರಾಪ್ತ ಹುಡುಗಿಯರು ದುರ್ಮರಣಕ್ಕೀಡಾಗಿರುವ ಘಟನೆ ಜಾರ್ಖಂಡ್ನ ಲತೇಹಾರ್ನಲ್ಲಿ ನಡೆದಿದೆ.
ಜಾರ್ಖಂಡ್ನಲ್ಲಿ ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ನದಿಯಲ್ಲಿ ಕರ್ಮ ವಿಸರ್ಜನೆ ಮಾಡಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ರೇಖಾ ಕುಮಾರಿ(18), ಲಕ್ಷ್ಮಿ ಕುಮಾರಿ (8), ರೀನಾ ಕುಮಾರಿ (11), ಮೀನಾ ಕುಮಾರಿ (8), ಪಿಂಕಿ ಕುಮಾರಿ (15), ಸುಷ್ಮಾ ಕುಮಾರಿ (7), ಸುನಿತಾ ಕುಮಾರಿ (17) ಸಾವಿಗೀಡಾಗಿದ್ದಾರೆ. ಇವರೆಲ್ಲರೂ ಶೇರೆಗಡಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಜಾರ್ಖಂಡ್ನ ಬುಡಕಟ್ಟು ಜನಾಂಗ ಕರ್ಮ ವಿಸರ್ಜನೆ ಎಂಬ ಸಾಂಪ್ರದಾಯಿಕ ವಿಶೇಷ ಹಬ್ಬ ಆಚರಣೆ ಮಾಡುತ್ತೆ. ಸಹೋದರರು ಆರೋಗ್ಯವಾಗಿ ಜೀವನ ನಡೆಸಲಿ ಎಂಬ ಉದ್ದೇಶದಿಂದ ಈ ಹಬ್ಬ ಆಚರಣೆ ಮಾಡಲಾಗುತ್ತದೆ. ಇದರ ಜೊತೆಗೆ ಜಮೀನಿನಲ್ಲಿ ಬೆಳೆದ ಬೆಳಗೆ ಪೂಜೆ ಮಾಡಿ ಅವುಗಳನ್ನ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಈ ವೇಳೆ, ಎಲ್ಲ ಬಾಲಕಿಯರು ನದಿಯಲ್ಲಿ ಮುಳುಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.