ಸಂಭಾಲ್ (ಉತ್ತರಪ್ರದೇಶ):ಎರಡು ಬಸ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, 8 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಲಹರಾವನ್ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.
ಮೃತರನ್ನು ವಿರ್ಪಾಲ್ (60), ಹ್ಯಾಪಿ (35), ಛೋಟೆ (40), ರಾಕೇಶ್ (30), ಅಭಯ್ (18), ವಿನೀತ್ (30) ಮತ್ತು ಭುರೆ (25) ಎಂದು ಗುರುತಿಸಲಾಗಿದೆ.