ನವದೆಹಲಿ:ತೈಲ ಉತ್ಪಾದನಾ ಕಂಪನಿಗಳು (ಒಎಂಸಿ) ಸತತ ಏಳು ದಿನಗಳವರೆಗೆ ಇಂಧನ ಬೆಲೆ ಪರಿಷ್ಕರಣೆಗೆ ಸದ್ಯ ವಿರಾಮ ಹೇಳಿದಂತಿದೆ. ಶನಿವಾರ ತೈಲ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ, ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 101.84 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬದಲಾಗದ ಬೆಲೆ ಲೀಟರ್‌ಗೆ 89.87 ರೂ. ಇದೆ.
ಇಂಧನದ ಪಂಪ್ ಬೆಲೆ ಭಾನುವಾರದಿಂದ ಸ್ಥಿರವಾಗಿದೆ. ಇದು ಕೊನೆಯದಾಗಿ ಜುಲೈ 17 ರಂದು ಹೆಚ್ಚಾಗಿದ್ದು, ಪೆಟ್ರೋಲ್ ಅನ್ನು ಪ್ರತಿ ಲೀಟರ್‌ಗೆ 30 ಪೈಸೆಗಳಷ್ಟು ಪರಿಷ್ಕರಿಸಲಾಯಿತು. ಆದರೆ ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ.
ಇಂಧನ ಬೆಲೆ ಏರಿಕೆಯ ವಿರಾಮಕ್ಕೆ ಒಂದು ಪ್ರಮುಖ ಕಾರಣವೆಂದರೆ ಜಾಗತಿಕ ತೈಲ ಬೆಲೆಗಳಲ್ಲಿ ಶೇಕಡಾ 10 ಕ್ಕಿಂತಲೂ ಹೆಚ್ಚು ಕುಸಿತವಾಗಿದ್ದು, ಕೆಲವು ವಾರಗಳ ಹಿಂದೆ ಬೆಂಚ್‌ಮಾರ್ಕ್ ಕಚ್ಚಾ ಬ್ಯಾರೆಲ್‌ಗೆ 69 ಡಾಲರ್‌ಗೆ ಇಳಿದಿದೆ. ಬಲವಾದ ಬೇಡಿಕೆಯ ಪ್ರಕ್ಷೇಪಗಳ ಮೇಲೆ ಅದು ಮತ್ತೆ ಬ್ಯಾರೆಲ್‌ಗೆ 74 ಡಾಲರ್‌ಗೆ ಏರಿತು. ಕಚ್ಚಾ ಉತ್ಪಾದನೆಯನ್ನು ಹೆಚ್ಚಿಸಲು ಒಪೆಕ್ ಒಪ್ಪಂದಕ್ಕೆ ಬಂದ ನಂತರ, ತೈಲ ಬೆಲೆಗಳು ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ.
ಓದಿ:ಜುಲೈ 26ರಿಂದ 'ರಿಲಯನ್ಸ್ ಡಿಜಿಟಲ್ ಇಂಡಿಯಾ Sale': ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿಗಳ ಮೇಲೆ ಭಾರಿ ಆಫರ್!