ನವದೆಹಲಿ:ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ಗೆ ಆನ್ಲೈನ್ ಮೂಲಕ ನಕಲಿ ಔಷಧ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ದೆಹಲಿ ಅಪರಾಧ ವಿಭಾಗ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ಔಷಧವನ್ನು ಜಪ್ತಿ ಮಾಡಲಾಗಿದೆ.
ಬಂಧಿತರಾದ ಏಳು ಜನರಲ್ಲಿ ವೈದ್ಯ, ಇಂಜಿನಿಯರ್ ಮತ್ತು ಎಂಬಿಎ ಪದವೀಧರರು ಇದ್ದಾರೆ. ಈ ಗ್ಯಾಂಗ್ನಲ್ಲಿ ಇನ್ನಷ್ಟು ಜನರಿದ್ದು ತಲೆಮರೆಸಿಕೊಂಡ ಅವರನ್ನು ಪತ್ತೆ ಮಾಡಲು ಪೊಲೀಸರು ಜಾಲ ಬೀಸಿದ್ದಾರೆ. ರೋಗಿಯ ಸಹಚರರನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ ನಕಲಿ ಔಷಧಗಳನ್ನು ಆನ್ಲೈನ್ ಮೂಲಕ ಸರಬರಾಜು ಮಾಡುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಆನ್ಲೈನ್ ಮೂಲಕ ಕ್ಯಾನ್ಸರ್ ನಕಲಿ ಔಷಧಿ ಮಾರಾಟ ಉತ್ತರಪ್ರದೇಶ, ಹರಿಯಾಣದಲ್ಲಿ ದಾಳಿ:ಈ ನಕಲಿ ಔಷಧ ತಯಾರು ಮಾಡುವ ಗ್ಯಾಂಗ್ ದೆಹಲಿಯಲ್ಲದೇ ಉತ್ತರಪ್ರದೇಶ, ಪಂಜಾಬ್ನಲ್ಲಿ ಕಾರ್ಖಾನೆಗಳನ್ನು ಹೊಂದಿದ್ದು, ಅವುಗಳ ಮೇಲೆ ದಾಳಿ ಮಾಡಲಾಗಿದೆ. ದೇಶದಲ್ಲಿ ಈ ಔಷಧ ಸಿಗುವುದಿಲ್ಲ ಎಂದು ಹೇಳಿ ದುಬಾರಿ ಬೆಲೆಗೆ ಅಗತ್ಯವಿರುವ ರೋಗಿಗಳಿಗೆ ಔಷಧಗಳನ್ನು ಮಾರಾಟ ಮಾಡುತ್ತಿದ್ದರು.
ಹರಿಯಾಣದ ಸೋನಿಪತ್, ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಔಷಧ ದಾಸ್ತಾನಿಡುವ ಗೋದಾಮನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಆ ರಾಜ್ಯದಲ್ಲೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ರೋಗಿಗಳನ್ನು ಸಂಪರ್ಕಿಸಿ ಪರಿಣಾಮಕಾರಿ ಔಷಧ ಎಂದು ನಂಬಿಸುತ್ತಿದ್ದರು.
8 ಕೋಟಿ ಸರಕು ವಶ:ಎರಡು ಕಡೆ ನಡೆದ ದಾಳಿಯಲ್ಲಿ ದಾಸ್ತಾನಿಟ್ಟಿದ್ದ 8 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಗ್ಯಾಂಗ್ ಮೂರ್ನಾಲ್ಕು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಅಂತಾರಾಷ್ಟ್ರೀಯ ಗ್ಯಾಂಗ್ ಜತೆ ನಂಟು ಶಂಕೆ:ಪ್ರಾಥಮಿಕ ತನಿಖೆಯ ಪ್ರಕಾರ ಬಂಧಿತ 7 ಮಂದಿ ಡ್ರಗ್ಸ್ ಮಾರಾಟಗಾರರು ಅಂತಾರಾಷ್ಟ್ರೀಯ ಗ್ಯಾಂಗ್ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ತಿಳಿದು ಬಂದಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಚೀನಾದಲ್ಲಿ ಇವರ ನಂಟಿದೆ ಎಂದು ಹೇಳಲಾಗಿದೆ. ವಿದೇಶಿ ಡ್ರಗ್ಸ್ ಮಾರಾಟಗಾರರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿದೆ.
ಓದಿ:ಮಹಿಳಾ ರೋಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ ಆರೋಪ: ವೈದ್ಯ ಅರೆಸ್ಟ್