ಕರ್ನಾಟಕ

karnataka

ETV Bharat / bharat

ಸುಮಿಯಲ್ಲಿ ಸಿಲುಕಿದ 694 ಭಾರತೀಯರ ಸುರಕ್ಷಿತ ಸ್ಥಳಾಂತರ: ಕೇಂದ್ರ ಸರ್ಕಾರ - ಸುಮಿಯಿಂದ 694 ಭಾರತೀಯರು ಶೀಘ್ರ ಭಾರತಕ್ಕೆ

ಉಕ್ರೇನ್​ನ ಸುಮಿಯಲ್ಲಿ ಸಿಲುಕಿರುವ 694 ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

indian-students
ಭಾರತೀಯ

By

Published : Mar 8, 2022, 7:55 PM IST

Updated : Mar 8, 2022, 10:23 PM IST

ನವದೆಹಲಿ:ಯುದ್ಧಪೀಡಿತ ಉಕ್ರೇನ್​ನ ನಗರವಾದ ಸುಮಿಯಲ್ಲಿ ಸಿಲುಕಿರುವ 694 ಭಾರತೀಯ ವಿದ್ಯಾರ್ಥಿಗಳನ್ನು ಬಸ್‌ಗಳಲ್ಲಿ ಸುರಕ್ಷಿತ ಸ್ಥಳವಾದ ಪೋಲ್ಟವಾಗೆ ಕರೆದೊಯ್ಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಷ್ಯಾದ ದಾಳಿಗೀಡಾಗಿರುವ ಉಕ್ರೇನ್​ನ ಸುಮಿಯಲ್ಲಿ 694 ಭಾರತೀಯರು ಸಿಲುಕಿರುವ ಬಗ್ಗೆ ಸೋಮವಾರ ರಾತ್ರಿ ಮಾಹಿತಿ ಬಂದಿದೆ. ಇಂದು ಅವರೆಲ್ಲರನ್ನೂ ಅಲ್ಲಿಂದ ಇನ್ನೊಂದು ಪ್ರದೇಶವಾದ ಪೋಲ್ಟವಾಗೆ ಬಸ್​ಗಳ ಮೂಲಕ ಸ್ಥಳಾಂತರಿಸಲಾಗಿದೆ. ಇವರನ್ನು ಶೀಘ್ರವೇ ಭಾರತಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಅಲ್ಲದೇ, ಸುಮಿಯಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಮಾರ್ಗಗಳ ಬಗ್ಗೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದರು ಎಂದು ಭಾರತೀಯರನ್ನು ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿರುವ ಸಚಿವ ಹರ್ದೀಪ್​ ಸಿಂಗ್​ ಪುರಿ ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೆ ಉಕ್ರೇನ್‌ನಿಂದ 17,100ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ.

ಇದನ್ನೂ ಓದಿ:'ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ..' ಶಸ್ತ್ರಾಸ್ತ್ರ ಹಿಡಿದ ಉಕ್ರೇನ್ ಮಹಿಳೆಯರು

Last Updated : Mar 8, 2022, 10:23 PM IST

ABOUT THE AUTHOR

...view details