ಮುಂಬೈ:ರಕ್ಕಸ ಕೊರೊನಾ ವೈರಸ್ ದಾಳಿಗೆ ಮಹಾರಾಷ್ಟ್ರ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಇಂದು ಕೂಡ ದಾಖಲೆ ಮಟ್ಟದಲ್ಲಿ ಡೆಡ್ಲಿ ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿವೆ.
ಕಳೆದ 24 ಗಂಟೆಯಲ್ಲಿ 773 ಜನರು ಮಹಾಮಾರಿಗೆ ಬಲಿಯಾಗಿದ್ದು, ಹೊಸದಾಗಿ 66,836 ಪ್ರಕರಣ ದಾಖಲಾಗಿವೆ. ಇದರ ಜತೆಗೆ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 74,045 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 6,91,851 ಸಕ್ರಿಯ ಪ್ರಕರಣಗಳಿದ್ದು, 41,88,266 ಜನರು ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಪುಣೆಯಲ್ಲಿ 9,863 ಪ್ರಕರಣ ಕಂಡು ಬಂದಿದ್ದು, 30 ಜನರು ಸಾವನ್ನಪ್ಪಿದ್ದಾರೆ, ನಾಗ್ಪುರ್ ಹಾಗೂ ಮುಂಬೈನಲ್ಲಿ ಕ್ರಮವಾಗಿ 7,970 ಹಾಗೂ 9,541 ಜನರಿಗೆ ಸೋಂಕು ತಗುಲಿದೆ. ದೇಶದಲ್ಲಿ ಇಂದು ಕೂಡ 3,32,730 ಕೋವಿಡ್ ಪ್ರಕರಣ ದಾಖಲಾಗಿದ್ದು, ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.