ಕರ್ನಾಟಕ

karnataka

ETV Bharat / bharat

PMGKAY ಅಡಿ ಮೇ- ಜೂನ್​ ತಿಂಗಳಲ್ಲಿ ಪಡಿತರ ಪಡೆದ ಫಲಾನುಭವಿಗಳೆಷ್ಟು? - ಉಚಿತ ಆಹಾರ ಧಾನ್ಯ

ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ(PMGKAY) ಅಡಿಯಲ್ಲಿ ಮೇ ತಿಂಗಳಲ್ಲಿ ಸುಮಾರು 75.08 ಕೋಟಿ ಫಲಾನುಭವಿಗಳು ಉಚಿತ ಪಡಿತರವನ್ನು ಪಡೆದಿದ್ದರೆ, ಜೂನ್‌ನಲ್ಲಿ 66.11 ಕೋಟಿ ಜನರಿಗೆ ಉಚಿತ ಪಡಿತರ ದೊರೆತಿದೆ.

PMGKAY
ಜೂನ್

By

Published : Jul 10, 2021, 6:51 AM IST

ನವದೆಹಲಿ: ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ((PMGKAY) ಅಡಿಯಲ್ಲಿ ಮೇ ತಿಂಗಳಲ್ಲಿ ಸುಮಾರು 75.08 ಕೋಟಿ ಫಲಾನುಭವಿಗಳು ಉಚಿತ ಪಡಿತರವನ್ನು ಪಡೆದಿದ್ದಾರೆ ಮತ್ತು ಜೂನ್​ ತಿಂಗಳಲ್ಲಿ ಒಟ್ಟು 66.11 ಕೋಟಿ ಜನ ಉಚಿತ ಪಡಿತರ ಪಡೆದಿದ್ದಾರೆ. ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಸರ್ಕಾರವು ಪಿಎಂಜಿಕೆಎ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಸಮಯಕ್ಕೆ ಅನುಗುಣವಾಗಿ ವಿತರಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂವೇದನಾಶೀಲಗೊಳಿಸಿದೆ.

ಈ ಯೋಜನೆಯಡಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ (ಎನ್‌ಎಫ್‌ಎಸ್‌ಎ) 80 ಕೋಟಿ ಫಲಾನುಭವಿಗಳಿಗೆ ಮೇ ಮತ್ತು ಜೂನ್ ತಿಂಗಳಿಗೆ ಪ್ರತಿ ವ್ಯಕ್ತಿಗೆ ಹೆಚ್ಚುವರಿ ಐದು ಕೆಜಿ ಆಹಾರ ಧಾನ್ಯಗಳನ್ನು (ಗೋಧಿ-ಅಕ್ಕಿ) ನೀಡುತ್ತಿದೆ. ಈ ಹಂಚಿಕೆ ನಿಯಮಿತ ಎನ್‌ಎಫ್‌ಎಸ್‌ಎ ಹಂಚಿಕೆಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುತ್ತದೆ.

ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಿಎಂಜಿಕೆವೈ ಯೋಜನೆಯನ್ನು ನವೆಂಬರ್​ವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿ ಕೇಂದ್ರವು ಪಡಿತರ ಕಾರ್ಡುದಾರರು ಮತ್ತು ಬಡ ಜನರ ಅಗತ್ಯತೆಗಳನ್ನು ಪೂರೈಸಲು 26,000 ಕೋಟಿ ರೂ. ಗಳನ್ನು ಖರ್ಚು ಮಾಡುತ್ತಿದೆ. PMGKAY-III (ಮೇ- ಜೂನ್​ 2021), ಅಡಿ ಒಟ್ಟು 79.39 ಲಕ್ಷ ಮೆಟ್ರಿಕ್​ ಟನ್​ ಧಾನ್ಯಗಳು, ಇದರಲ್ಲಿ 41.85 ಲಕ್ಷ ಮೆಟ್ರಿಕ್​ ಟನ್​ ಅಕ್ಕಿ ಹಾಗೂ 37.54 ಲಕ್ಷ ಮೆಟ್ರಿಕ್​ ಟನ್ ಗೋಧಿ ಒಳಗೊಂಡಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 78.26 ಲಕ್ಷ ಮೆಟ್ರಿಕ್​ ಟನ್ ಆಹಾಧಾನ್ಯಗಳನ್ನು ಎಫ್​ಸಿಐ (Food Corporation of India)ರವಾನಿಸಿದೆ.

ಇದರಲ್ಲಿ 37.54 ಎಲ್‌ಎಂಟಿ ಮತ್ತು 33.05 ಲಕ್ಷ ಮೆಟ್ರಿಕ್​ ಟನ್ ಆಹಾರ ಧಾನ್ಯಗಳನ್ನು ಕ್ರಮವಾಗಿ ಮೇ ಮತ್ತು ಜೂನ್‌ನಲ್ಲಿ ಬಡ ಮತ್ತು ನಿರ್ಗತಿಕ ಜನರಿಗೆ ಉಚಿತವಾಗಿ ವಿತರಿಸಲಾಯಿತು. ಒಟ್ಟು 70.5 ಲಕ್ಷ ಮೆಟ್ರಿಕ್​ ಟನ್ ಆಹಾರ ಧಾನ್ಯಗಳನ್ನು ಈವರೆಗೆ ವಿತರಿಸಲಾಗಿದೆ. ಕೇಂದ್ರವು 107.58 ಲಕ್ಷ ಮೆಟ್ರಿಕ್​ ಟನ್ ಅಕ್ಕಿ ಮತ್ತು 91.20 ಲಕ್ಷ ಮೆಟ್ರಿಕ್​ ಟನ್ ಗೋಧಿ ಸೇರಿದಂತೆ 198.78 ಎಲ್ಎಂಟಿ ಆಹಾರ ಧಾನ್ಯಗಳನ್ನು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ-ನವೆಂಬರ್ 2021 ಕ್ಕೆ ಪಿಎಂಜಿಕೆಐ -IV ಅಡಿಯಲ್ಲಿ ಹಂಚಿಕೆ ಮಾಡಲಿದೆ. ಸುಮಾರು 22 ರಾಜ್ಯಗಳು ಭಾರತದ ಆಹಾರ ನಿಗಮದ ಕೇಂದ್ರದಿಂದ (ಎಫ್‌ಸಿಐ)ಆಹಾರ ಧಾನ್ಯಗಳನ್ನು (4.52 ಎಲ್‌ಎಂಟಿ ಅಕ್ಕಿ ಮತ್ತು 1.39 ಎಲ್‌ಎಂಟಿ ಗೋಧಿ) ವಿತರಣೆ ಪಡೆಯುತ್ತಿವೆ. ಎಫ್‌ಸಿಐ ಇದುವರೆಗೆ ಪಿಎಂಜಿಕೆಐ IV ಅಡಿಯಲ್ಲಿ 5.91 ಲಕ್ಷ ಮೆಟ್ರಿಕ್​ ಟನ್ ಆಹಾರ ಧಾನ್ಯಗಳನ್ನು ಪೂರೈಸಿದೆ.

ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಡಿ ಅಕ್ಕಿ, ಗೋಧಿ ಮತ್ತು ಧಾನ್ಯಗಳನ್ನು ಫಲಾನುಭವಿಗಳಿಗೆ ಪಡಿತರ ಅಂಗಡಿಗಳ ಮೂಲಕ ಪ್ರತಿ ಕೆ.ಜಿ.ಗೆ 3, 2 ಮತ್ತು 1 ರೂ. ಗಳಲ್ಲಿ ವಿತರಿಸಲಾಗುತ್ತಿದೆ.

ABOUT THE AUTHOR

...view details