ಕರ್ನಾಟಕ

karnataka

By

Published : May 24, 2023, 12:52 PM IST

ETV Bharat / bharat

ಕಾಶಿ ವಿಶ್ವನಾಥ ಕಾರಿಡಾರ್‌ನಲ್ಲಿ ಪ್ರವಾಸೋದ್ಯಮ ಚೇತರಿಕೆ​: ₹643 ಕೋಟಿ ಜಿಎಸ್​ಟಿ ಕಲೆಕ್ಷನ್‌!

ವಾರಾಣಸಿಯಲ್ಲಿ ಕಾಶಿ ವಿಶ್ವನಾಥನ ಕಾರಿಡಾರ್​ ಉದ್ಘಾಟನೆಯ ಬಳಿಕ ಪ್ರವಾಸೋದ್ಯಮ ಚುರುಕು ಪಡೆದಿದೆ. ಅಲ್ಲದೇ, ವ್ಯಾಪಾರವೂ ವೃದ್ಧಿಯಾಗಿ ಜಿಎಸ್​ಟಿ ಸಂಗ್ರಹ ದುಪ್ಪಟ್ಟಾಗಿದೆ ಎಂದು ಯುಪಿ ಸರ್ಕಾರ ಮಾಹಿತಿ ನೀಡಿದೆ.

ಕಾಶಿ ವಿಶ್ವನಾಥ ಕಾರಿಡಾರ್
ಕಾಶಿ ವಿಶ್ವನಾಥ ಕಾರಿಡಾರ್

ವಾರಾಣಸಿ:ವಾರಾಣಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಅಭಿವೃದ್ಧಿಯ ಬಳಿಕ ಪ್ರವಾಸೋದ್ಯಮಕ್ಕೆ ಅದ್ಭುತ ಉತ್ತೇಜನ ಸಿಕ್ಕಿದೆ. ಇಲ್ಲಿಗೆ ಪ್ರವಾಸಿಗರ ಆಗಮನವೂ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟುಗಳೂ ವೇಗ ಪಡೆದುಕೊಂಡಿವೆ. ಇದೆಲ್ಲದರ ಪರಿಣಾಮ ಈ ಬಾರಿ ಜಿಎಸ್‌ಟಿ ಸಂಗ್ರಹ ಉತ್ತಮವಾಗಿದೆ.

ವಾರಾಣಸಿಯ ಸಂಸದರಾದ ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಥಳದ ಅಭಿವೃದ್ಧಿಗೆ ವೈಯಕ್ತಿಕವಾಗಿಯೂ ಶ್ರಮಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದ ಹಲವು ಯೋಜನೆಗಳನ್ನು ಇಲ್ಲಿಗೆ ತಂದಿದ್ದಾರೆ. ಈ ನಿಟ್ಟಿನಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಾಣ ಬಹುದೊಡ್ಡ ಹೆಜ್ಜೆ. ಇದು ರಾಜಕೀಯ ದೃಷ್ಟಿಯಿಂದಷ್ಟೇ ಅಲ್ಲದೇ ಕಾಶಿ ಅಭಿವೃದ್ಧಿಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ.

643 ಕೋಟಿ ರೂ. ಜಿಎಸ್‌ಟಿ ಹೆಚ್ಚಳ:ವಾರಾಣಸಿಯಲ್ಲಿ ಈ ಬಾರಿ ಜಿಎಸ್‌ಟಿ ಸಂಗ್ರಹವು ಮೊದಲಿಗಿಂತ ದುಪ್ಪಟ್ಟಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಈ ಸಲ 643 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬಂದಿದೆ. ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯ ನಂತರ ವಾರಾಣಸಿ ಗಾಜಿಪುರ ಮತ್ತು ಚಂದೌಲಿಯಲ್ಲಿ ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಸಂಗ್ರಹ ಹೆಚ್ಚಾಗಿದೆ ಎಂದು ಜಿಎಸ್‌ಟಿಯ ಹೆಚ್ಚುವರಿ ಆಯುಕ್ತ ಪ್ರಿನ್ಸ್ ಕುಮಾರ್ ತಿಳಿಸಿದ್ದಾರೆ.

ಹೆಚ್ಚುತ್ತಿರುವ ಹೂಡಿಕೆಯಿಂದ ಅಭಿವೃದ್ಧಿ:ಇದೆಲ್ಲಕ್ಕೂ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಕಾರಣ ಎಂಬುದು ವಾಸ್ತವ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ, ಇಲ್ಲಿ ಸುಭದ್ರ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಜನರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯಿಂದಾಗಿ ಅಭಿವೃದ್ಧಿ ಮತ್ತು ವ್ಯಾಪಾರ ಎರಡೂ ಉತ್ತೇಜನ ಪಡೆಯುತ್ತಿವೆ. ಇಲ್ಲಿ ಹೊಸ ಹೋಟೆಲ್‌ಗಳು, ಪಿಜಿ ನಿರ್ಮಾಣಕ್ಕಾಗಿ ಅರ್ಜಿಗಳು ಬರುತ್ತಲೇ ಇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಾಶಿ ವಿಶ್ವನಾಥ ಕಾರಿಡಾರ್​ ಅನ್ನು 2021 ರ ಡಿಸೆಂಬರ್ 13 ರಂದು ಉದ್ಘಾಟಿಸಲಾಯಿತು. ಇದಕ್ಕಿಂತ ಹಿಂದಿ ವರ್ಷ ಅಂದರೆ, 2020- 2021 ರಲ್ಲಿ ಇಲ್ಲಿನ 59,890 ವ್ಯಾಪಾರಿಗಳು 1126.97 ಕೋಟಿ ರೂ. ಜಿಎಸ್‌ಟಿ ಪಾವತಿಸಿದ್ದರು. 2021- 2022 ರ ಹಣಕಾಸು ವರ್ಷದಲ್ಲಿ ತೆರಿಗೆದಾರರ ಸಂಖ್ಯೆ 69,071 ಕ್ಕೆ ಹೆಚ್ಚಳವಾಗಿ, ಈ ಸಮಯದಲ್ಲಿ ಜಿಎಸ್​ಟಿ ಸಂಗ್ರಹವು 1468.02 ಕ್ಕೆ ತಲುಪಿತ್ತು. ಇದು ಈ ಹಣಕಾಸು ವರ್ಷವಾದ 2022- 2023 ರಲ್ಲಿ 81,518 ತೆರಿಗೆದಾರರಿಂದ 1,769.94 ಕೋಟಿ ರೂ. ಜಿಎಸ್‌ಟಿ ಬಂದಿದೆ ಎಂದು ಜಿಎಸ್‌ಟಿಯ ಹೆಚ್ಚುವರಿ ಆಯುಕ್ತ ರಾಜಕುಮಾರ ಕುಮಾರ್ ಅಂಕಿ ಸಂಖ್ಯೆ ಸಮೇತ ಮಾಹಿತಿ ನೀಡಿದರು.

2,800 ಕ್ಕೇರಿದ ವಸತಿ ಗೃಹಗಳು: ವಾರಾಣಸಿಯ ಪ್ರಸಿದ್ಧ ಘಾಟ್​ಗಳ ಹತ್ತಿರವೇ ವಾಸಿಸುವ ಜನರು ಹೋಟೆಲ್​ ಹಾಗೂ ಪಿಜಿ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದು ಘಾಟ್​ಗಳ ಚಿತ್ರಣವನ್ನು ಬದಲಿಸಿದೆ. ಅಷ್ಟೇ ಅಲ್ಲ, ಆದಾಯವನ್ನೂ ಹೆಚ್ಚಿಸುತ್ತಿದೆ. ಕಾಶಿಯ ಅಸ್ಸಿ ಮತ್ತು ದಶಾಶ್ವಮೇಧ ಘಾಟ್‌ಗಳಲ್ಲೀಗ ಪಿಜಿ ಮತ್ತು ಹೋಟೆಲ್‌ಗಳ ಸಂಖ್ಯೆ 2,800ಕ್ಕೇರಿವೆ.

ಇದನ್ನೂ ಓದಿ:Modi in Varanasi: ಬನಾರಸ್​​ ರೈಲು ನಿಲ್ದಾಣಕ್ಕೆ ತಡರಾತ್ರಿ ಭೇಟಿ, ಪರಿಶೀಲನೆ ನಡೆಸಿದ ನಮೋ

ABOUT THE AUTHOR

...view details