ಕರ್ನಾಟಕ

karnataka

ETV Bharat / bharat

ಕೋವಿಡ್​ ಬಿಕ್ಕಟ್ಟು ನಿರ್ವಹಣೆಯಲ್ಲಿ ರಾಹುಲ್​ಗಿಂತ ಮೋದಿ ಬೆಸ್ಟ್.. ಸಿ-ವೋಟರ್ ಸಮೀಕ್ಷೆ ಬಹಿರಂಗ

ಮತ್ತೊಂದೆಡೆ, ಶೇ.63.1 ರಷ್ಟು ಜನರು ನರೇಂದ್ರ ಮೋದಿ ಅವರು ಕೊರೊನಾ ಬಿಕ್ಕಟ್ಟನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆಂದು ಭಾವಿಸುತ್ತಾರೆ. ನಗರ ಪ್ರದೇಶಗಳಲ್ಲಿ, ಶೇ.65.8 ರಷ್ಟು ಜನರು ಮೋದಿಯವರು ಕೊರೊನಾ ಬಿಕ್ಕಟ್ಟನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆಂದು ಭಾವಿಸಿದರೆ, ಗ್ರಾಮೀಣ ಪ್ರದೇಶದ ಶೇ.61.9ರಷ್ಟು ಜನರು ಅದೇ ಭಾವನೆ ಹೊಂದಿದ್ದಾರೆ..

By

Published : May 29, 2021, 9:09 PM IST

ಕೋವಿಡ್​ ಬಿಕ್ಕಟ್ಟು ನಿರ್ವಹಣೆಯಲ್ಲಿ ರಾಹುಲ್​ಗಿಂತ ಮೋದಿ ಬೆಸ್ಟ್
ಕೋವಿಡ್​ ಬಿಕ್ಕಟ್ಟು ನಿರ್ವಹಣೆಯಲ್ಲಿ ರಾಹುಲ್​ಗಿಂತ ಮೋದಿ ಬೆಸ್ಟ್

ನವದೆಹಲಿ : ದೇಶದ ಕೋವಿಡ್ ಸ್ಥಿತಿ ಎದುರಿಸಿದ ಕೇಂದ್ರ ಸರ್ಕಾರದ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಎಬಿಪಿ-ಸಿ ಓಟರ್​ ಸಮೀಕ್ಷೆ ಹೊರಬಿದ್ದಿದೆ.

ಶೇ. 63.1 ರಷ್ಟು ಜನ ಮೋದಿ ಕೋವಿಡ್​​​ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದಿದ್ದಾರೆ. ಜೊತೆಗೆ ಉಳಿದ ಶೇ.22ರಷ್ಟು ಮಂದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಉತ್ತರಿಸಿದ್ದಾರೆ.

ಕೋವಿಡ್ ರೋಗವನ್ನು ಎದುರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರಗಳ ಕಾರ್ಯತಂತ್ರವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ಲಸಿಕೆ ತಂತ್ರವನ್ನು ಸರಿಯಾಗಿ ಪಡೆಯಲು ಸರ್ಕಾರ ವಿಫಲವಾದರೆ, ಭಾರತವು ಅನೇಕ ಕೋವಿಡ್ ಅಲೆಗಳಿಗೆ ಗುರಿಯಾಗುತ್ತದೆ ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಹೇಳಿದ್ದರು.

ದೇಶದಲ್ಲಿ ಕೋವಿಡ್‌ನಿಂದಾಗಿ ಎಷ್ಟೋ ಸಾವುಗಳಿಗೆ ಕೇಂದ್ರ ಮತ್ತು ಪ್ರಧಾನ ಮಂತ್ರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿದ್ದರು.

ಎಬಿಪಿ-ಸಿ ವೋಟರ್​ ಸಮೀಕ್ಷೆಯ ಪ್ರಕಾರ, ಪ್ರಸ್ತುತ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ, ಅವರು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದೆಂದು ಶೇ. 22ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ನಗರ ಪ್ರದೇಶಗಳಲ್ಲಿ, ಶೇ.20.1ರಷ್ಟು ಜನರು ಕಾಂಗ್ರೆಸ್ ನಾಯಕರು ದೇಶದ ಪ್ರಧಾನಮಂತ್ರಿಯಾಗಿದ್ದರೆ ಕೊರೊನಾ ಬಿಕ್ಕಟ್ಟನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದೆಂದು ಭಾವಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ. 22.8 ರಷ್ಟು ಜನರು ಈ ಅಭಿಪ್ರಾಯವನ್ನು ತಳೆದಿದ್ದಾರೆ.

ಮತ್ತೊಂದೆಡೆ, ಶೇ.63.1 ರಷ್ಟು ಜನರು ನರೇಂದ್ರ ಮೋದಿ ಅವರು ಕೊರೊನಾ ಬಿಕ್ಕಟ್ಟನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆಂದು ಭಾವಿಸುತ್ತಾರೆ.

ನಗರ ಪ್ರದೇಶಗಳಲ್ಲಿ, ಶೇ.65.8 ರಷ್ಟು ಜನರು ಮೋದಿಯವರು ಕೊರೊನಾ ಬಿಕ್ಕಟ್ಟನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆಂದು ಭಾವಿಸಿದರೆ, ಗ್ರಾಮೀಣ ಪ್ರದೇಶದ ಶೇ.61.9ರಷ್ಟು ಜನರು ಅದೇ ಭಾವನೆ ಹೊಂದಿದ್ದಾರೆ.

ಒಟ್ಟು ಶೇ.14.9ರಷ್ಟು ಜನರು ಈ ಅಂಶದ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ ಎಂದಿದ್ದಾರೆ. ದೇಶಾದ್ಯಂತ 12,070 ಜನರ ಬಳಿ ಮೇ 23 ರಿಂದ ಮೇ 27ರವರೆಗೆ ಈ ಸಮೀಕ್ಷೆಯನ್ನು ನಡೆಸಲಾಯಿತು ಎಂದು ಸಿ ವೋಟರ್ ಸಂಸ್ಥೆ ತಿಳಿಸಿದೆ.

ABOUT THE AUTHOR

...view details