ನವದೆಹಲಿ:ವಿಶ್ವದ 100 ವಾಯುಮಾಲಿನ್ಯ ನಗರಗಳಲ್ಲಿ 63 ನಗರಗಳು ಭಾರತದಲ್ಲಿವೆ. ಈ ಕುರಿತ ವಿಶ್ವವಾಯು ಗುಣಮಟ್ಟ ವರದಿಯನ್ನು ಸ್ವಿಡ್ಜರ್ಲ್ಯಾಂಡ್ನ ಐಕ್ಯೂ ಏರ್ ಸಂಸ್ಥೆ ಪ್ರಕಟಿಸಿದೆ. ಭಾರತದಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆ ಮಟ್ಟದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2021ರಲ್ಲಿ ಭಾರತದ ವಾಯು ಮಾಲಿನ್ಯವು ತೀರಾ ಹದಗೆಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯು(WHO) ಮಾಲಿನ್ಯ ಗುಣಮಟ್ಟವನ್ನು ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂ ಎಂಬ ಆಧಾರ ನಿಗದಿ ಮಾಡಿದೆ. ಇದಕ್ಕಿಂತಲೂ 10 ಪಟ್ಟು ಹೆಚ್ಚು ಭಾರತದ ನಗರಗಳಲ್ಲಿ ವಾಯುಮಾಲಿನ್ಯವಿದೆ ಎಂಬ ಆತಂಕಕಾರಿ ಅಂಶವನ್ನು ವರದಿ ಹೇಳಿದೆ.
ದೆಹಲಿ ಸತತ 2ನೇ ವರ್ಷವೂ ಕಳಪೆ:ಉತ್ತರ ಭಾರತವು ಅತಿ ಕಲುಷಿತವಾಗಿದ್ದು, ದೆಹಲಿ ಸತತ ಎರಡನೇ ವರ್ಷ 'ವಿಶ್ವದ ಅತ್ಯಂತ ಕಲುಷಿತ ರಾಜಧಾನಿ'ಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವು ಹಿಂದಿನ ವರ್ಷಕ್ಕಿಂತ ಶೇ.15 ರಷ್ಟು ಏರಿಕೆಯಾಗಿದ್ದು, ಇಲ್ಲಿ ವಾಯು ಮಾಲಿನ್ಯವು ವಿಶ್ವಸಂಸ್ಥೆಯ ಸುರಕ್ಷತಾ ಮಿತಿಗಳಿಗಿಂತ ಸುಮಾರು 20 ಪಟ್ಟು ಹೆಚ್ಚಿದೆ. ವಾರ್ಷಿಕ ಸರಾಸರಿಗೆ PM2.5 ಪ್ರತಿ ಘನ ಮೀಟರ್‌ಗೆ 96.4 ಮೈಕ್ರೋಗ್ರಾಂಗಳಷ್ಟಿದೆ ಎಂದಿದೆ ವರದಿ.