ಶ್ರೀನಗರ, ಜಮ್ಮು ಕಾಶ್ಮೀರ:2021ರ ವರ್ಷದಲ್ಲಿ ಈವರೆಗೆ ಜಮ್ಮು ಕಾಶ್ಮೀರದಲ್ಲಿ ಅನೇಕ ಬಾರಿ ಭಯತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ಕೌಂಟರ್ಗಳಲ್ಲಿ 61 ಭಯೋತ್ಪಾದಕರನ್ನು ಕೊಲ್ಲಲಾಗಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಹಿಂದಿನ ತಿಂಗಳು ಮಾಹಿತಿ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಕೊರೊನಾ ಲಾಕ್ಡೌನ ಕಾರಣದಿಂದಾಗಿ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಕಡಿಮೆ ಮಾಡಲಾಗಿದೆ ಎಂದಿದ್ದರು.
ಲಾಕ್ಡೌನ್ ಅನ್ನು ನಿರ್ವಹಿಸಲು ಭದ್ರತಾ ಪಡೆಗಳು ಅದರಲ್ಲೂ ಪೊಲೀಸ್ ಮತ್ತು ಪ್ಯಾರಾಮಿಲಿಟರಿ ಫೋರ್ಸ್ಗಳು ಪಾಲ್ಗೊಂಡ ಕಾರಣದಿಂದಾಗಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಸ್ವಲ್ಪ ಹಿನ್ನಡೆ ಉಂಟಾಯಿತು ಎಂದಿದ್ದಾರೆ.
ಇದನ್ನೂ ಓದಿ:ಮದುವೆಯಾದ ತಕ್ಷಣ ಮದುವೆ ಮಂಟಪದಿಂದ ಹೊರ ಬಂದ ವಧು ಮಾಡಿದ್ದೇನು ಗೊತ್ತಾ..?
ಹಿಂದಿನ ತಿಂಗಳು ಅನ್ಲಾಕ್ ಪ್ರಕ್ರಿಯೆ ಆರಂಭವಾದ ಕಾರಣದದಿಂದ ಉಗ್ರರ ವಿರುದ್ಧ ಸೇನಾ ಚಟುವಟಿಕೆಗಳು ಚುರುಕುಗೊಳ್ಳಿವೆ ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಶ್ರೀನಗರ ಬಳಿಯ ಮಾಲುರ ಪ್ರದೇಶದಲ್ಲಿ ಇಬ್ಬರು ಉಗ್ರರನ್ನ ಸೇನಾಪಡೆಕೊಂದಿದ್ದು, ಕುಲ್ಗಾಂನಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಉಗ್ರರು ಸೇನಾಪಡೆಯ ಗುಂಡಿಗೆ ಬಲಿಯಾಗಿದ್ದಾರೆ.