ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ 600ಕ್ಕೂ ಹೆಚ್ಚು ನಿಷ್ಕ್ರಿಯ ಮೊಬೈಲ್​ ಟವರ್​ ಕಳವು - ತಮಿಳುನಾಡಿನಲ್ಲಿ ಮೊಬೈಲ್​ ಟವರ್​ ಕಳವು

ತಮಿಳುನಾಡಿನಲ್ಲಿ ಖಾಸಗಿ ಕಂಪನಿಯ ಒಡೆತನದ 600ಕ್ಕೂ ಅಧಿಕ ಮೊಬೈಲ್​ ಟವರ್​ಗಳನ್ನು ಕಳ್ಳತನ ಮಾಡಲಾಗಿದೆ.

ತಮಿಳುನಾಡಿನಲ್ಲಿ 600 ಅಧಿಕ ನಿಷ್ಕ್ರಿಯ ಮೊಬೈಲ್​ ಟವರ್​ ಕಳವು
ತಮಿಳುನಾಡಿನಲ್ಲಿ 600 ಅಧಿಕ ನಿಷ್ಕ್ರಿಯ ಮೊಬೈಲ್​ ಟವರ್​ ಕಳವು

By

Published : Jun 22, 2022, 10:05 PM IST

ತಮಿಳುನಾಡು:ಈರೋಡ್‌ನ ಚೆನ್ನಿಮಲೈ ಬೆಟ್ಟಗಳಲ್ಲಿ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಒಡೆತನದ 600 ಕ್ಕೂ ಹೆಚ್ಚು ನಿಷ್ಕ್ರಿಯ ಮೊಬೈಲ್​ ಟವರ್​ಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಕಂಪನಿ ನೀಡಿದ ದೂರಿನನ್ವಯ ತನಿಖೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ಏನು?:ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದು ದೇಶದ ಎಲ್ಲ ಕಡೆ ಮೊಬೈಲ್​ ಟವರ್​ಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡುತ್ತಿದೆ. ತಮಿಳುನಾಡು ರಾಜ್ಯ ಒಂದರಲ್ಲೇ 6 ಸಾವಿರಕ್ಕೂ ಅಧಿಕ ಟವರ್​ಗಳನ್ನು ಸ್ಥಾಪಿಸಿದೆ.

2018 ರಲ್ಲಿ ಖಾಸಗಿ ಶಿಪ್ಪಿಂಗ್ ಕಂಪನಿಯು ನೆಟ್‌ವರ್ಕಿಂಗ್ ಸೇವೆಯನ್ನು ನಿಲ್ಲಿಸಿತು. ಪರಿಣಾಮವಾಗಿ ಟವರ್​ ಸ್ಥಾಪಿಸಿದ ಜಿಟಿಎಲ್​ ಕಂಪನಿ ಭಾರತದಾದ್ಯಂತ ಸ್ಥಾಪಿಸಲಾದ ಸೆಲ್ ಫೋನ್ ಟವರ್‌ಗಳು ನಿಷ್ಕ್ರಿಯಗೊಂಡವು. ಕೊರೊನಾ ಅವಧಿಯಲ್ಲಿ ಯಾವುದೇ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಕೂಡ ಕೈಗೊಳ್ಳಲಾಗಿಲ್ಲ.

ಈ ವೇಳೆ ಟವರ್​ಗಳಲ್ಲಿ ಕೆಲವನ್ನು ಕಳ್ಳತನ ಮಾಡಿದ ಬಗ್ಗೆ ಕಂಪನಿಯ ಗಮನಕ್ಕೆ ಬಂದಿದೆ. ಈ ವೇಳೆ ದೂರು ನೀಡಿ ತನಿಖೆ ನಡೆಸಿದಾಗ ಕಣ್ಗಾವಲು ಇಲ್ಲದ ಪ್ರದೇಶದಲ್ಲಿನ 600 ಕ್ಕೂ ಅಧಿಕ ಟವರ್​ಗಳು ನಾಪತ್ತೆಯಾಗಿದ್ದು, ಇವನ್ನು ಕಳವು ಮಾಡಿರುವುದು ಗೊತ್ತಾಗಿದೆ.

ಒಂದು ಟವರ್​ ಸ್ಥಾಪನೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಎಂದು ಕಂಪನಿ ಹೇಳಿದೆ. ವಿಚಿತ್ರ ಅಂದರೆ ಕಂಪನಿಯ ಉದ್ಯೋಗಿಯೇ ನಿಗೂಢ ಗ್ಯಾಂಗ್​ ಜೊತೆ ಸೇರಿಕೊಂಡು ಈ ಟವರ್​ಗಳನ್ನು ಕದ್ದಿದ್ದಾನಂತೆ.

ಇದನ್ನೂ ಓದಿ:ಬ್ಯಾಡ್ಮಿಂಟನ್‌ ಆಡುತ್ತಿದ್ದ ಯುವಕ ನೋಡನೋಡುತ್ತಿದ್ದಂತೆ ಕುಸಿದು ಬಿದ್ದು ಸಾವು: ವಿಡಿಯೋ

ABOUT THE AUTHOR

...view details