ಮುಂಬೈ: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು-ಸಾವಿನ ನಡುವಿನ ಹೋರಾಟವೇ ಜೀವನ. ಇದು ಪ್ರಕೃತಿ ನಿಯಮ. ಮನುಷ್ಯನಿಗೆ ಸಾವು ಅನಿವಾರ್ಯವಾದರೂ ಮೃತ್ಯುವಿನ ಅವತಾರಗಳು ವಿಭಿನ್ನ!.ಇಲ್ಲೊಬ್ಬ ವ್ಯಕ್ತಿಗೆ ಸಾವು ಅದ್ಯಾವ ರೂಪದಲ್ಲಿ ಬಂದಪ್ಪಳಿಸಿತು ನೋಡಿ..
ಮೇ 23ರ ಬೆಳಗ್ಗೆ 10 ಗಂಟೆಯ ಸುಮಾರಿಗೆ 60 ವರ್ಷದ ವ್ಯಕ್ತಿ ಮತ್ತು 40 ವರ್ಷದ ಮಹಿಳೆ ಕುರ್ಲಾದ ಹೋಟೆಲ್‌ಗೆ ಆಗಮಿಸಿದ್ದರು. ಮೊದಲೇ ಬುಕ್ ಮಾಡಿರುವ ಕೊಠಡಿಗೆ ಖುಷಿಯಿಂದಲೇ ತೆರಳಿದ್ದಾರೆ. ಸ್ವಲ್ಪ ಸಮಯದ ನಂತರ ನನ್ನ ಗೆಳೆಯ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು ರೂಮ್ನಿಂದ ಮಹಿಳೆ ರಿಸೆಪ್ಶನ್‌ಗೆ ಕರೆ ಮಾಡಿದ್ದಾರೆ.
ಇದನ್ನೂ ಓದಿ:ಸೆಕ್ಸ್ನಿಂದ ದೂರವಿದ್ದೀರಾ? ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತೇ?
ಹೋಟೆಲ್ ಸಿಬ್ಬಂದಿ ಕೊಠಡಿಗೆ ಧಾವಿಸಿ ನೋಡಿದಾಗ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಯಸ್ಸಾದ ವ್ಯಕ್ತಿಯನ್ನು ಸಿಯಾನ್‌ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಈ ಘಟನೆಯ ಬಳಿಕ ಮಹಿಳೆಯನ್ನು ಕುರ್ಲಾ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ.
ಮೃತಪಟ್ಟ ವ್ಯಕ್ತಿ ವರ್ಲಿ ನಿವಾಸಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಾವಿಬ್ಬರು ಲೈಂಗಿಕ ಕ್ರಿಯೆಯಲ್ಲಿದ್ದೆವು. ಈ ಸಮಯದಲ್ಲಿ ಅವರು ಮದ್ಯ ಸೇವಿಸಲು ಪ್ರಯತ್ನಿಸಿದರು. ಆದರೆ ಹಠಾತ್ ಆಗಿ ಕುಸಿದು ಬಿದ್ದು ಪ್ರಜ್ಞಾಹೀನರಾದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿ ಮೇರೆಗೆ ಕುರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಾವಿನ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ವರದಿಗಾಗಿ ಪೊಲೀಸ್ ತಂಡ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.