ಕರ್ನಾಟಕ

karnataka

ETV Bharat / bharat

ನಿಲ್ಲದ ಕಾಮುಕರ ಅಟ್ಟಹಾಸ.. 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ - ಬಾಲಕಿ ಮೇಲೆ ಅತ್ಯಾಚಾರ

ಹೈದರಾಬಾದ್​ನ ಸಯೀದಾಬಾದ್​ನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆರೋಪಿ ತಲೆ ಮರೆಸಿಕೊಂಡಿರುವ ಆರೋಪ ಕೇಳಿಬಂದಿದೆ.

ನಿಲ್ಲದ ಕಾಮುಕರ ಅಟ್ಟಹಾಸ
ನಿಲ್ಲದ ಕಾಮುಕರ ಅಟ್ಟಹಾಸ

By

Published : Sep 10, 2021, 2:16 PM IST

ಹೈದರಾಬಾದ್: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಆರೋಪ ನಗರದ ಸಯೀದಾಬಾದ್ ಪ್ರದೇಶದ ಸಿಂಗರೇಣಿ ಕಾಲೋನಿಯಲ್ಲಿ ಕೇಳಿ ಬಂದಿದೆ.

ಕಾಣೆಯಾಗಿದ್ದ ಬಾಲಕಿ ಮೃತದೇಹ ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಪಕ್ಕದ ಮನೆಯಲ್ಲಿ ಪತ್ತೆಯಾಗಿದೆ. ಹತ್ಯೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಸ್ಥಳೀಯರು ಆರೋಪಿಗಳನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಶವ ಪರೀಕ್ಷೆಗಾಗಿ ಮೃತದೇಹ ನೀಡದಿರಲು ಸ್ಥಳೀಯರು ಮುಂದಾಗಿದ್ದು, ಪೊಲೀಸರು ಅವರ ಮನವೊಲಿಸಿ ಶವವನ್ನು ಪರೀಕ್ಷೆಗೆ ರವಾನಿಸಿದರು. ಈ ವೇಳೆ, ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಕಾರದ ಪುಡಿ ಎರಚಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಯಿತು.

ಬಾಲಕಿ ಮೃತದೇಹ ಪತ್ತೆಯಾಗುತ್ತಿದ್ದಂತೆ, ಆರೋಪಿ ರಾಜು ತಲೆ ಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಪೊಲೀಸರು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಬ್ಬಕ್ಕೆ ಹೋಗುತ್ತಿದ್ದಾಗ ಅಪಘಾತ: 2 ವರ್ಷದ ಮಗು ಸೇರಿ ಇಬ್ಬರ ಸಾವು, ಮತ್ತಿಬ್ಬರು ಗಂಭೀರ

ಮೃತಳ ಕುಟುಂಬಸ್ಥರಿಗೆ 50 ಸಾವಿರ ರೂಪಾಯಿ ನೆರವು ನೀಡುವುದಾಗಿ ಹೈದರಾಬಾದ್​ನ ಜಿಲ್ಲಾಧಿಕಾರಿ ಎಲ್. ಶರ್ಮಾನ್​ ಘೋಷಿಸಿದ್ದಾರೆ.

ABOUT THE AUTHOR

...view details