ಕರ್ನಾಟಕ

karnataka

ETV Bharat / bharat

ಬೆಳಗ್ಗೆ ಶಾಲೆಯಲ್ಲಿ ವಿದ್ಯಾರ್ಜನೆ: ರಾತ್ರಿ ತಾತನೊಂದಿಗೆ ಪ್ರತಿಭಟನೆ - ದೆಹಲಿ ರೈತರ ಧರಣಿ ಲೇಟೆಸ್ಟ್​​ ನ್ಯೂಸ್

ತೋಹಾನಾದಲ್ಲಿ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಧರಣಿಗೆ 6 ವರ್ಷದ ಬಾಲಕ ಸಾಥ್​​ ನೀಡಿದ್ದಾನೆ. ಬೆಳಗ್ಗೆಯಲ್ಲ ಶಾಲೆಯಲ್ಲಿ ಕಲಿತು ರಾತ್ರಿ ತಾತನೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾನೆ.

ಬಾಲಕ  ಏಕಂ
child ekam

By

Published : Feb 5, 2021, 1:36 PM IST

ಫತೇಹಾಬಾದ್:ತೋಹಾನಾದಲ್ಲಿ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಧರಣಿಗೆ 6 ವರ್ಷದ ಬಾಲಕ ತನ್ನದೇ ಆದ ಕೊಡುಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.

ತಾತನೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದ ಬಾಲಕ

ಸುಮಾರು 6 ವರ್ಷದ ಏಕಂ ಎಂಬ ಬಾಲಕ ನಿತ್ಯ ಶಾಲೆಯಿಂದ ಬಂದು ಟೌನ್ ಪಾರ್ಕ್ ಬಳಿ ಧರಣಿ ಸ್ಥಳಕ್ಕೆ ಆಗಮಿಸುತ್ತಾನೆ. ರಾತ್ರಿಯಲ್ಲ ತನ್ನ ತಾತನ ಜೊತೆಗಿರುವ ಮೂಲಕ ಧರಣಿಗೆ ಸಾಥ್​​ ನೀಡುತ್ತಿದ್ದಾನೆ.

ರೈತರಿಗೆ ಆಹಾರ ತಯಾರಿಕೆ :

ಕಳೆದ 36 ದಿನಗಳಿಂದ ಧರಣಿಗೆ ಬರುವ ರೈತರಿಗೆ ಏಕಂ ಮತ್ತು ಅವನ ಅಜ್ಜ ಆಹಾರ ತಯಾರಿಕೆ ಮಾಡುತ್ತಾರೆ. ಇದರ ಜೊತೆಗೆ ಧರಣಿ ಸಂಬಂಧ ರೂಪುರೇಷಗಳನ್ನು ಸಿದ್ಧಪಡಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಜ್ಜನ ಜೊತೆಯೇ ರಾತ್ರಿ ಅಲ್ಲೆ ಉಳಿದುಕೊಂಡು ಬೆಳಗ್ಗೆ ಮನೆಗೆ ತೆಳರುತ್ತಾನಂತೆ.

ಓದಿ: ಭಾರತದಲ್ಲಿ ಕೋವಿಡ್ ಲಸಿಕೆ ತುರ್ತು ಬಳಕೆಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಫೈಜರ್..!

ಪ್ರತಿಭಟನಾ ಸ್ಥಳದಲ್ಲಿ ಅಧ್ಯಯನ ಮಾಡುವ ಪೋರ:

ತಾತನೊಂದಿಗೆ ಶಾಲೆಯ ಕೆಲಸ ಮಾಡುತ್ತಿರುವ ಬಾಲಕ

ಶಾಲೆಯನ್ನು ಮುಗಿಸಿಕೊಂಡು ನೇರವಾಗಿ ಬಾಲಕ ತನ್ನ ತಾತ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಹೋಗುತ್ತಾನೆ. ಈ ವೇಳೆ ಶಾಲೆಯಲ್ಲಿ ನೀಡಿದ ಕೆಲಸಗಳನ್ನು ಅಜ್ಜನ ಸಹಾಯದಿಂದ ಮುಗಿಸಿಕೊಳ್ಳುತ್ತಾನೆ. ಧರಣಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ವಿದ್ಯುತ್​​ ವ್ಯವಸ್ಥೆಯಿಲ್ಲ. ಆದರೂ ಬಾಲಕ ತನ್ನ ತಾತನ ಮೊಬೈಲ್​​ ಬೆಳಕಿನಲ್ಲಿ ಕೆಲಸಗಳನ್ನು ಮಾಡಿಕೊಳ್ಳುತ್ತಾನೆ. ಶಾಲೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಧರಣಿಗೆ ಬರುವುದನ್ನು ನಿಲ್ಲಿಸಿಲ್ಲವಂತೆ.

ABOUT THE AUTHOR

...view details