ಹೆಚ್ಚು ಕ್ಯಾಲೋರಿಯಿರುವ ಆಹಾರ ಸೇವಿಸಿ, ಅಡ್ಡಾದಿಡ್ಡಿ ದೇಹ ಬೆಳೆಸಿಕೊಂಡು ಪಶ್ಚಾತ್ತಾಪ ಪಡುವ ಬದಲು, ಬಿಡುವಿನ ಸಮಯದಲ್ಲಿ ವರ್ಕೌಟ್ ಮಾಡಿ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಿ.
ನೀವು ಸುಂದರವಾಗಿ, ಸ್ಲಿಮ್ಮಾಗಿ ಕಾಣಬೇಕೇ? ಈ ಕೆಳಗಿನ ಕ್ರಮಗಳನ್ನು ಅನುಸರಿಸಿ - ಆಲ್ಕೋಹಾಲ್
ಸಾಮಾನ್ಯವಾಗಿ ಎಲ್ಲರೂ ಸ್ಲಿಮ್ ಆಗಿ, ಸುಂದರವಾಗಿ ಆರೋಗ್ಯವಾಗಿರಬೇಕೆಂದುಕೊಳ್ತಾರೆ. ಆದರೆ, ಆಹಾರ ಪದ್ಧತಿ ಬದಲಾಯಿಸಲು ಮಾತ್ರ ಒಪ್ಪುವುದಿಲ್ಲ. ಆದರೆ, ತಜ್ಞರು ನೀಡಿರುವ ಈ ಸಲಹೆ ಅನುಸರಿಸಿದ್ರೆ, ನೀವು ಆರೋಗ್ಯಕರ ಜೀವನ ನಡೆಸಬಹುದು..
ಸ್ಲಿಮ್
ನೀವು ಸ್ಲಿಮ್ಮಾಗಿ, ಸುಂದರವಾಗಿ ಕಾಣುವುದರ ಜತೆಗೆ ಆರೋಗ್ಯಕರ ಜೀವನ ನಡೆಸಲು ಡಯೆಟೀಶಿಯನ್ ಮತ್ತು ನ್ಯೂಟ್ರೀಶಿಯನ್ ಆಗಿರುವ ಸಕಿನಾ ಮುಸ್ತಾನ್ಸಿರ್ ಕೆಲ ಸಲಹೆಗಳನ್ನು ನೀಡಿದ್ದಾರೆ.
- ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ. ಬೀದಿಬದಿಯ ಆಹಾರ ಸೇವಿಸಬೇಡಿ. ಡ್ರೈ ಫ್ರೂಟ್ಸ್, ಮಲ್ಟಿಗ್ರೇನ್ ಬ್ರೆಡ್ ಸ್ಯಾಂಡ್ವಿಚ್ಗಳು, ಪ್ರೋಟೀನ್ಯುಕ್ತ ಆಹಾರ ಸೇವಿಸಿ.
- ಅತಿ ಹೆಚ್ಚು ನೀರು ಕುಡಿಯಿರಿ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಕಡಿಮೆ ಊಟ ಮಾಡಬಹುದು. ಹಸಿವು ಬೇರೆ, ಬಾಯಾರಿಕೆ ಬೇರೆಯಾದರೂ ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ಕಡಿಮೆ ಊಟ ಸೇವಿಸಲು ಸಹಕಾರಿಯಾಗುತ್ತದೆ.
- ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರ ತಪ್ಪಿಸಬೇಡಿ. ಇದರಿಂದಾಗಿ ಆಲಸ್ಯ ಉಂಟಾಗುತ್ತದೆ. ನೀವು ಆರೋಗ್ಯಕರ ಆಹಾರ ಪದ್ಧತಿ ಹೊಂದಿದ್ದರೆ, ಬೊಜ್ಜು ಹೆಚ್ಚಾಗುವುದಿಲ್ಲ. ಜತೆಗೆ ಬೆಳಗಿನ ಬ್ರೇಕ್ ಫಾಸ್ಟ್ ಹಣ್ಣು, ಮೊಟ್ಟೆ ಇದ್ದರೆ ಒಳಿತು.
- ಆಲ್ಕೋಹಾಲ್ ಅಥವಾ ಕೂಲ್ ಡ್ರಿಂಕ್ ಕುಡಿಯುವುದು ಬೇಡ. ಆಲ್ಕೋಹಾಲ್ ಸೇವನೆಯಿಂದ ಬಂದ ಕೊಬ್ಬನ್ನು ಕರಗಿಸುವುದು ಕಷ್ಟ. ಹಾಗಾಗಿ, ಕೂಲ್ ಡ್ರಿಂಕ್ಸ್ ಬದಲಿಗೆ ಹೆಚ್ಚಿನ ನೀರನ್ನು ಕುಡಿಯಿರಿ.
- ಯಾವುದೇ ಆಹಾರವನ್ನಾಗಲಿ ಮಿತವಾಗಿ ಸೇವಿಸಿ, ಹೆಚ್ಚಾಗಿ ತಿಂದರೆ ಕ್ಯಾಲೋರಿ ಹೆಚ್ಚಾಗಿ ಬೊಜ್ಜು ಉತ್ಪತ್ತಿಯಾಗುತ್ತದೆ. ತರಕಾರಿಗಳ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದು.
- ಪ್ರಯಾಣ ಮಾಡುವಾಗಲೂ ಅತಿಯಾದ ನೀರನ್ನು ಸೇವಿಸಿ ಹಾಗೂ ಮಲಬದ್ಧತೆಯಾಗದಂತೆ ನೋಡಿಕೊಳ್ಳಿ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.