ಕರ್ನಾಟಕ

karnataka

ETV Bharat / bharat

ಕೋವಿನ್​ ಪೋರ್ಟಲ್​ನಲ್ಲಿ ಒಂದೇ ಮೊಬೈಲ್​ ನಂಬರ್​ನಿಂದ 6 ಜನರು ನೋಂದಣಿ : ಕೇಂದ್ರ

ವ್ಯಾಕ್ಸಿನೇಷನ್ ಪಡೆದುಕೊಂಡಿರುವ ಅರ್ಹರ ಪ್ರಮಾಣಪತ್ರದಲ್ಲಿ ಯಾವುದಾದರೂ ದೋಷ ಕಂಡು ಬಂದಿದ್ದರೆ ಅವುಗಳನ್ನ ಸರಿಪಡಿಸಿಕೊಳ್ಳಲು ಇದೀಗ ಕೋವಿಡ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಏಳು ದಿನಗಳಲ್ಲಿ ಅದನ್ನ ಸರಿಪಡಿಸಲಾಗುವುದು ಎಂದು ಕೇಂದ್ರ ತಿಳಿಸಿದೆ..

cowin registration covid19 vaccination
cowin registration covid19 vaccination

By

Published : Jan 21, 2022, 8:37 PM IST

ನವದೆಹಲಿ :ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಲು ಕೋವಿನ್​​ ಪೋರ್ಟಲ್​​ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಲಸಿಕಾಕರಣಕ್ಕೆ ಇದೀಗ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಕೇಂದ್ರ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

C0WIN ಪೋರ್ಟಲ್​​ನಲ್ಲಿ ಒಂದೇ ಮೊಬೈಲ್​ ನಂಬರ್ ಬಳಕೆ ಮಾಡಿಕೊಂಡು ಆರು ಸದಸ್ಯರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ನಾಲ್ವರು ಸದಸ್ಯರು ಈ ಪೋರ್ಟಲ್​ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿತ್ತು. ಆದರೆ, ಇದೀಗ ಅದರ ಮಿತಿ ಏರಿಸಲಾಗಿದೆ.

ಕೋವಿಡ್​ ವ್ಯಾಕ್ಸಿನೇಷನ್​ಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. COWIN ಪೋರ್ಟಲ್​​ನಲ್ಲಿ ಕಾಣಿಸಿಕೊಂಡಿದ್ದ ಕೆಲವೊಂದು ಸಮಸ್ಯೆ ಕೂಡ ಬಗೆಹರಿಸಲಾಗಿದ್ದು, ಹೊಸ ವೈಶಿಷ್ಟ್ಯ ಪರಿಚಯಿಸಲಾಗಿದೆ.

ಇದನ್ನೂ ಓದಿರಿ:ಸೆಲ್ಫಿಗೋಸ್ಕರ ಬೈಕ್​​ ಸ್ಟಂಟ್ ಮಾಡಲು ಹೋಗಿ ಭೀಕರ ಅಪಘಾತ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ..

ವ್ಯಾಕ್ಸಿನೇಷನ್ ಪಡೆದುಕೊಂಡಿರುವ ಅರ್ಹರ ಪ್ರಮಾಣಪತ್ರದಲ್ಲಿ ಯಾವುದಾದರೂ ದೋಷ ಕಂಡು ಬಂದಿದ್ದರೆ ಅವುಗಳನ್ನ ಸರಿಪಡಿಸಿಕೊಳ್ಳಲು ಇದೀಗ ಕೋವಿಡ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಏಳು ದಿನಗಳಲ್ಲಿ ಅದನ್ನ ಸರಿಪಡಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details