ಚೆಂಗಲ್ಪಟ್ಟು(ತಮಿಳುನಾಡು):ದೈವದರ್ಶನಕ್ಕೆ ಹೋಗಿ ವಾಪಸ್ ಬರುತ್ತಿದ್ದ 10 ಮಂದಿ ಭಕ್ತರಲ್ಲಿ 6 ಮಂದಿ ಭೀಕರ ಸರಣಿ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ಉಳಿದವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ತಿಕೈ ದೀಪಂ ಹಬ್ಬದ ನಿಮಿತ್ತ ನಿನ್ನೆ(ಡಿಸೆಂಬರ್ 6) ಟಾಟಾ ಏಸ್ ವಾಹನದಲ್ಲಿ ಪೊಝಿಚಲೂರ್ ಜ್ಞಾನಾಂಬಿಕ ನಗರದ 10 ಮಂದಿ ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ಇಂದು ಮನೆಗೆ ವಾಪಸ್ ಬರುತ್ತಿದ್ದಾಗ ಮುಂಜಾನೆ 4 ಗಂಟೆಯ ಸುಮಾರಿಗೆ ಎದುರಿನಿಂದ ಬರುತ್ತಿದ್ದ ಲಾರಿಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ.