ನಂದೂರ್ಬಾರ್: ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ತೋರ್ನಾಮಲ್ ನಲ್ಲಿ ಪ್ರಯಾಣಿಕರಿದ್ದ ಜೀಪ್ ಕಮರಿಗೆ ಬಿದ್ದು 6 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಭೀಕರ ರಸ್ತೆ ಅಪಘಾತ; ಆರು ಮಂದಿ ಪ್ರಯಾಣಿಕರ ದುರ್ಮರಣ - ಕಮರಿಗೆ ಬಿದ್ದ ಜೀಪ್
ಮಹಾರಾಷ್ಟ್ರದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಕಮರಿಗೆ ಉರುಳಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 10 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆರು ಮಂದಿ ದುರ್ಮರಣ
ಈ ದುರಂತದಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:ಸೆಲ್ಫಿ ತೆಗೆಯಲು ಹೋಗಿ ಮೂವರು ಯುವಕರು ನೀರುಪಾಲಾದ ಪ್ರಕರಣ: ಇಬ್ಬರ ಮೃತದೇಹ ಪತ್ತೆ