ನವದೆಹಲಿ:ದೇಶದ ವಿವಿಧ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಸುಮಾರು 180 ಆಫ್ಘನ್ ಸೈನಿಕರು ಮತ್ತು ಕೆಡೆಟ್‌ಗಳಿಗೆ ಇಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ ಸುಮಾರು ಆರು ತಿಂಗಳ ಅವಧಿಯ ಇ-ವೀಸಾ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಆದರೂ ಸುಮಾರು 140 ಆಫ್ಘನ್ ಸೈನಿಕರು ಮತ್ತು ಕೆಡೆಟ್‌ಗಳು ತಾವು ಕೆನಡಾ, ಇಂಗ್ಲೆಂಡ್ ಮತ್ತು ಜರ್ಮನಿ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಹೊರಡಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ನಮ್ಮ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲ ಆಫ್ಘನ್ ಕೆಡೆಟ್‌ಗಳು ಮತ್ತು ಸೈನಿಕರಿಗೆ ಆರು ತಿಂಗಳ ಕಾಲ ಇ - ವೀಸಾಗಳನ್ನು ನೀಡಲಾಗುವುದು. ಈ ಅವಧಿಯಲ್ಲಿ ಅವರ ಭವಿಷ್ಯದ ಬಗ್ಗೆ ಅವರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರಿ ಮೂಲಗಳು ಎಎನ್ಐಗೆ ಮಾಹಿತಿ ನೀಡಿವೆ.