ಗಂಜಾಂ (ಒಡಿಶಾ):ಗಂಜಾಂ-ಕಂಧಮಾಲ್ ಜಿಲ್ಲೆಯ ಭಂಜನಗರದ ಕಳಿಂಗಘಾಟಿಯ ತಪ್ಪಲಿನಲ್ಲಿರುವ ಗಡಿ ಪ್ರದೇಶವಾದ ದುರ್ಗಾಪ್ರಸಾದ್ ಎಂಬಲ್ಲಿ ಟೂರಿಸ್ಟ್ ಬಸ್ ಅಪಘಾತಕ್ಕೀಡಾಗಿದ್ದು ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 20 ಜನರಿಗೆ ಗಂಭೀರ ಗಾಯಗಳಾಗಿವೆ.
ಟೂರಿಸ್ಟ್ ಬಸ್ ಪಲ್ಟಿಯಾಗಿ 6 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ - West Bengal tourist bus
ಪಶ್ಚಿಮ ಬಂಗಾಳದ ಪ್ರವಾಸಿ ಬಸ್ವೊಂದು ಅಪಘಾತಕ್ಕೀಡಾಗಿದ್ದು ಆರು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
6 killed, over 20 injured after tourist bus overturns near Kalinga Ghati
ಪಶ್ಚಿಮ ಬಂಗಾಳದ ಪ್ರವಾಸಿ ಬಸ್ ಇದಾಗಿದ್ದು ದರಿಂಗ್ಬಡಿಯಿಂದ ಪ.ಬಂಗಾಳದತ್ತ ಹಿಂತಿರುಗುತ್ತಿದ್ದಾಗ ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಮೃತರು ಮತ್ತು ಗಾಯಗೊಂಡವರೆಲ್ಲರೂ ಪಶ್ಚಿಮ ಬಂಗಾಳದ ಹೌರಾ ಪ್ರದೇಶದ ಉದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯವರು ಎಂದು ತಿಳಿದು ಬಂದಿದೆ.