ಇಟಾವಾ(ಉತ್ತರಪ್ರದೇಶ):ಕಾರೊಂದು ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮೈನ್‌ಪುರಿ - ಇಟಾವಾದ ಹೆದ್ದಾರಿಯ ಸೆಫಾಯಿ ಪೊಲೀಸ್ ವೃತ್ತದ ಬಳಿ ನಡೆದಿದೆ. ಮೃತರನ್ನು ಮಂಜಿತ್ (27), ಸದಾನ್ (23), ಬ್ರಜ್ಮೋಹನ್( 23), ವಿಶೇಷ್( 25) ಕರಣ್ (29), ಮತ್ತು ವಿಪಿನ್ (24) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸೆಫಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಮೃತರೆಲ್ಲರೂ ಜಸ್ವಂತನಗರ ಪೊಲೀಸ್ ವೃತ್ತದ ನಿವಾಸಿಗಳಾಗಿದ್ದು, ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯ ಫೋಟೋ ತೆಗೆಯಲು ಕಾರಿನಲ್ಲಿ ತೆರಳುತ್ತಿದ್ದರು. ಕಾರಿನ ಟೈರ್ ಸವೆದಿದ್ದರಿಂದ, ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.