ಕರ್ನಾಟಕ

karnataka

ETV Bharat / bharat

‘ಅಣ್ಣ.. ಪ್ಲೀಸ್ ನನ್ನನ್ನು ಕಾಪಾಡು’... ಸೆಕ್ಸ್​ ರಾಕೆಟ್​ಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ಪೊಲೀಸರು! - ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳ ಬಂಧನ

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ.

6 held by Delhi Police for running sex racket in Mathura  sex racket in Mathura  sex racket in Delhi  ಸೆಕ್ಸ್​ ರಾಕೆಟ್​ಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ದೆಹಲಿ ಪೊಲೀಸರು  ಉತ್ತರಪ್ರದೇಶದ ಮಥುರಾದಲ್ಲಿ ವೇಶ್ಯಾವಾಟಿಕೆ ದಂಧೆ  ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳ ಬಂಧನ  ದೆಹಲಿ ಪೊಲೀಸರ ಸುದ್ದಿ
ಸೆಕ್ಸ್​ ರಾಕೆಟ್​ಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ಪೊಲೀಸರು

By

Published : Apr 26, 2022, 12:03 PM IST

ಮಥುರಾ/ನವದೆಹಲಿ:ಮಥುರಾ ಜಿಲ್ಲೆಯಲ್ಲಿ ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಆಮಿಷಕ್ಕೆ ಒಳಗಾಗಿದ್ದ ಬಾಲಕಿಯನ್ನೂ ರಕ್ಷಿಸಲಾಗಿದೆ. ಏಪ್ರಿಲ್ 24 ರಂದು ದೆಹಲಿಯ ಐಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ 14 ವರ್ಷದ ಬಾಲಕಿ ಅಪಹರಣದ ಬಗ್ಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸ್​ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಆರೋಪಿಗಳನ್ನು ಜುಬಿದ್ (34), ರವಿ (27), ರಾಮ್ ಕಿಲವನ್ ಗುಪ್ತಾ (29), ಸನ್ನಿ (33), ಪೂಜಾ (27) ಮತ್ತು ಬಿಮ್ಲೇಶ್ (30) ಎಂದು ಗುರುತಿಸಲಾಗಿದೆ. ಸಂತ್ರಸ್ತೆ ತನ್ನ ಸಹೋದರನಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ತನ್ನನ್ನು ಕಾಪಾಡುವಂತೆ ಒತ್ತಾಯಿಸಿದ್ದಾಳೆ. ಸಹೋದರನಿಗೆ ಈ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಯ ಪ್ರವೃತ್ತರಾದ ಪೊಲೀಸರು ನೆಟ್​ವರ್ಕ್​ ಆಧಾರದ ಮೇಲೆ ಮಥುರಾದ ಕೋಸಿ ಕಲಾನ್‌ನಲ್ಲಿರುವ ಹೋಟೆಲ್‌ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಬಾಲಕಿ ಪತ್ತೆಯಾಗಿದ್ದಾಳೆ. ಆಕೆಯನ್ನು ರಕ್ಷಿಸಿ ಜುಬಿದ್ ಹಾಗೂ ಬಾಡಿಗೆಗೆ ಹೋಟೆಲ್ ನಡೆಸುತ್ತಿದ್ದ ರವಿಯನ್ನು ಬಂಧಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಬಿದ್ ಮಥುರಾ ನಿವಾಸಿಯಾಗಿದ್ದು, ರವಿ ಹರಿಯಾಣದ ಪಲ್ವಾಲ್ ಮೂಲದವನಾಗಿದ್ದಾನೆ. ಆರೋಪಿಗಳಿಬ್ಬರನ್ನೂ ವಿಚಾರಣೆಗೊಳಪಡಿಸಿದಾಗ, ಲಜಪತ್ ನಗರದ ನಿವಾಸಿ ಗುಪ್ತಾ ಎಂಬಾತ ಸಂತ್ರಸ್ತೆಯನ್ನು ದೆಹಲಿಯಿಂದ ಕರೆದೊಯ್ದು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದನು ಎಂದು ಬಾಯ್ಬಿಟ್ಟಿದ್ದಾರೆ ಅಂತಾ ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ.

ಕಲ್ಯಾಣಪುರಿ ನಿವಾಸಿ ಸನ್ನಿ ಮತ್ತು ಅವರ ಸಹೋದರಿ ಪೂಜಾ ಕೂಡ ಗುಪ್ತಾ ಗ್ಯಾಂಗ್​ನ ಭಾಗವಾಗಿದ್ದಾರೆ. ಗುಪ್ತಾ ಏಪ್ರಿಲ್ 21 ರಂದು ಸಂತ್ರಸ್ತೆಯನ್ನು ಕರೆತಂದು ಜುಬಿದ್​ ಹೋಟೆಲ್‌ನಲ್ಲಿ ಬಚ್ಚಿಟ್ಟಿದ್ದನು. ಜುಬಿದ್ ಪತ್ನಿ ಬಿಮ್ಲೇಶ್​ ಬಾಲಕಿಗೆ ಮದ್ದು ಮಾತ್ರೆಗಳು ಮತ್ತು ಚುಚ್ಚುಮದ್ದನ್ನು ನೀಡುತ್ತಿದ್ದಳು. ಬಾಲಕಿ ಮೂರ್ಛೆ ಹೋದ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ. ಬಳಿಕ ಆಕೆಯ ಹೇಳಿಕೆ ಪಡೆಯಲಾಗಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಚೌಹಾಣ್ ಹೇಳಿದರು.

ABOUT THE AUTHOR

...view details