ಹೈದರಾಬಾದ್: ತೆಲಂಗಾಣವಿಧಾನ ಪರಿಷತ್ತಿಗೆ (Legislative Council )ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣರಾಷ್ಟ್ರ ಸಮಿತಿ (ಟಿಆರ್‌ಎಸ್)(Telangana Rashtra Samithi) ಶಾಸಕರ ಕೋಟಾದಿಂದ ನಾಮನಿರ್ದೇಶನಗೊಂಡ ಎಲ್ಲಾ ಆರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟಿಆರ್‌ಎಸ್‌ನಿಂದ ಆರು ಎಂಎಲ್‌ಸಿ ನಾಮನಿರ್ದೇಶಿತರು ಅವಿರೋಧವಾಗಿ ಆಯ್ಕೆ
ದ್ವೈವಾರ್ಷಿಕ ಚುನಾವಣೆ ನಡೆದಿದ್ದು, ಇದರಲ್ಲಿ ಈ ಆರು ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅಭ್ಯರ್ಥಿಗಳನ್ನು ಚುನಾಯಿತರೆಂದು ಘೋಷಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಜಂಟಿ ಕಾರ್ಯದರ್ಶಿ ಉಪೇಂದರ್ ರೆಡ್ಡಿ ವರದಿ ನೀಡಿದ್ದಾರೆ.
ದ್ವೈವಾರ್ಷಿಕ ಚುನಾವಣೆ ನಡೆದಿದ್ದು, ಇದರಲ್ಲಿ ಈ ಆರು ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅಭ್ಯರ್ಥಿಗಳನ್ನು ಚುನಾಯಿತರೆಂದು ಘೋಷಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಜಂಟಿ ಕಾರ್ಯದರ್ಶಿ ಉಪೇಂದರ್ ರೆಡ್ಡಿ ವರದಿ ನೀಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಗುತಾ ಸುಖೇಂದರ್ ರೆಡ್ಡಿ, ಕಡಿಯಂ ಶ್ರೀಹರಿ, ಬಂದ ಪ್ರಕಾಶ್, ಪಾಡಿ ಕೌಶಿಕ್ ರೆಡ್ಡಿ, ಟಿ.ರವೀಂದರ್ ರಾವ್ ಮತ್ತು ಪಿ.ವೆಂಕಟರಾಮಿ ರೆಡ್ಡಿ ಅವಿರೋಧವಾಗಿ ಆಯ್ಕೆ ಆದವರು. ನೂತನವಾಗಿ ಆಯ್ಕೆಯಾದ ಎಲ್ಲ ಎಂಎಲ್‌ಸಿಗಳು ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.