ದಕ್ಷಿಣ 24 ಪರಗಣಾ (ಪಶ್ಚಿಮ ಬಂಗಾಳ): ಚಾಲಕನ ನಿಯಂತ್ರಣ ತಪ್ಪಿ ಬೋಲೆರೋ ಪಿಕ್ ಅಪ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಜನ ಸ್ಥಳದಲ್ಲೇ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಾ ಜಿಲ್ಲೆಯ ಬಕುಲ್ತಾಲ್ ಬಳಿ ಕಳೆದ ರಾತ್ರಿ ನಡೆದಿದೆ.
ಅಪಘಾತದಲ್ಲಿ ಮಡಿದವರ ಮೃತದೇಹಗಳು ಅಪಘಾತದಲ್ಲಿ 17 ಜನ ಗಾಯಗೊಂಡಿದ್ದು, ನಿಮ್ಪಿತ್ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವಾಹನದಲ್ಲಿ 27 ಜನರಿದ್ದು, ತಮಿಳುನಾಡಿಗೆ ಸಂಚರಿಸುತ್ತಿದ್ದರು. ಈ ವೇಳೆ ಚಾಲಕ ನಿಯಂತ್ರಣ ತಪ್ಪಿದ್ದರಿಂದ ಮರಕ್ಕೆ ವಾಹನ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ರಾತ್ರಿಯಾದ್ದರಿಂದ ಚಾಲಕ ನಿದ್ರೆ ಮಂಪರಲ್ಲಿ ಇದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ವಾಹನ ಚಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಇಂಜಿನ್ ಇಲ್ಲದೆ ಚಲಿಸಿದ 6 ರೈಲ್ವೆ ಬೋಗಿಗಳು.. ಮುಂದೇನಾಯ್ತು..