ನಿಜಾಮಾಬಾದ್:ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಪಾಸ್‌ಪೋರ್ಟ್ ಪಡೆಯುವ ದಂಧೆಯನ್ನು ಬೇಧಿಸಲಾಗಿದ್ದು, ಈ ಸಂಬಂಧ 6 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಇದುವರೆಗೆ 6 ಜನರನ್ನು ಬಂಧಿಸಿದ್ದಾರೆ. ದಂಧೆ ಸಂಬಂಧ ವಿವರವಾದ ತನಿಖೆ ನಡೆಯುತ್ತಿದೆ. ಯಾರಿಗೆ ಪಾಸ್‌ಪೋರ್ಟ್‌ಗಳು ದೊರೆತಿವೆ ಎಂಬ ಬಗ್ಗೆ ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಬಾಂಗ್ಲಾದೇಶದ ಪ್ರಜೆಗಳೂ ಈ ದಂಧೆಯ ಭಾಗವಾಗಿದ್ದಾರೆಯೇ ಎಂಬ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.