ಕರ್ನಾಟಕ

karnataka

ETV Bharat / bharat

4G ಗಿಂತ 10 ಪಟ್ಟು ವೇಗದ 5G ಸೇವೆ ಇನ್ನಷ್ಟು ಸನಿಹ: ಈ ನಗರಗಳ ಜನರಿಗೆ ಮೊದಲು ಸೌಲಭ್ಯ ಲಭ್ಯ

ಭಾರತದಲ್ಲಿ ಶೀಘ್ರದಲ್ಲೇ 5G ಸೇವೆಗಳು ಪ್ರಾರಂಭವಾಗಲಿದೆ. ದೇಶದ ಟೆಲಿಕಾಂ ದೈತ್ಯ ಖಾಸಗಿ ಕಂಪನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಈ ತಿಂಗಳಾಂತ್ಯದ ವೇಳೆಗೆ 5G ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ತಿಳಿದುಬಂದಿದೆ.

5G rollout in India
5G rollout in India

By

Published : Aug 24, 2022, 8:38 PM IST

ಭಾರತದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ 5G ಸೇವೆ ಬಳಕೆದಾರರಿಗೆ ಲಭ್ಯವಾಗಲಿದೆ. ವರದಿಗಳ ಪ್ರಕಾರ, ದೂರಸಂಪರ್ಕ ದೈತ್ಯ ಖಾಸಗಿ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಈ ತಿಂಗಳ ಅಂತ್ಯಕ್ಕೆ ಬಹುನಿರೀಕ್ಷಿತ ಸೇವೆಗಳನ್ನು ಪ್ರಾರಂಭಿಸಲಿದ್ದಾರೆ.

ಸೆಪ್ಟೆಂಬರ್ 29, 2022 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರ ಅಧಿಕೃತವಾಗಿ 5ಜಿ ಪ್ರಾರಂಭಿಸಲಿದೆ. 75ನೇ ಸ್ವಾತಂತ್ರ್ಯ ದಿನದ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ 5Gಯನ್ನು ಬೇಗ ಪ್ರಾರಂಭಿಸಲಾಗುವುದು. ಅದರ ವೇಗವು 4G ನೆಟ್‌ವರ್ಕ್‌ಗಿಂತ 10 ಪಟ್ಟು ಹೆಚ್ಚಿರಲಿದೆ ಎಂದು ತಿಳಿಸಿದ್ದರು.

ಮೊದಲು ಯಾವ್ಯಾವ ನಗರಕ್ಕೆ ಈ ಸೌಲಭ್ಯ?: 5G ಯನ್ನು ಹಂತಹಂತವಾಗಿ ಜಾರಿಗೆ ತರಲಾಗುತ್ತಿದೆ. ಮೊದಲ ಹಂತದಲ್ಲಿ ಕೇವಲ 13 ಆಯ್ದ ನಗರಗಳು ವೇಗದ 5G ಇಂಟರ್ನೆಟ್ ಸೇವೆ ಪಡೆಯಲಿವೆ. ಈ ನಗರಗಳಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ಸೇರಿವೆ. ಈ ಮೇಲೆ ತಿಳಿಸಿದ ನಗರಗಳಲ್ಲಿ ಪ್ರತಿಯೊಬ್ಬ ನಾಗರಿಕರು ತಕ್ಷಣಕ್ಕೆ 5G ಸೇವೆಗಳನ್ನು ಪಡೆಯುವುದಿಲ್ಲ ಎಂಬ ಅಂಶವೂ ನಿಮ್ಮ ಗಮನಕ್ಕಿರಲಿ.

ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಈಗಾಗಲೇ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಸ್ಪೆಕ್ಟ್ರಮ್ ಹಂಚಿಕೆ ಪತ್ರಗಳನ್ನು ನೀಡಿದ್ದು, 5G ಬಿಡುಗಡೆಗೆ ಸಜ್ಜಾಗುವಂತೆ ಕೇಳಿಕೊಂಡಿದ್ದಾರೆ. ಸೇವಾ ಪೂರೈಕೆದಾರರಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ಅದಾನಿ ಡೇಟಾ ನೆಟ್‌ವರ್ಕ್ಸ್ ಮತ್ತು ವೊಡಾಫೋನ್ ಐಡಿಯಾದಿಂದ ಇತ್ತೀಚಿನ ಹರಾಜಿನಲ್ಲಿ ಸ್ಪೆಕ್ಟ್ರಮ್‌ಗಾಗಿ ಸುಮಾರು ₹17,876 ಕೋಟಿ ಹಣವನ್ನು ಕೇಂದ್ರ ದೂರಸಂಪರ್ಕ ಸಚಿವಾಲಯಕ್ಕೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ, ಟೆಲಿಕಾಂ ಇಲಾಖೆ (DoT)ಯು ತರಂಗಗಳ ಯಶಸ್ವಿ ಬಿಡ್ಡರ್‌ಗಳು ಮುಂಗಡ ಪಾವತಿಗಳನ್ನು ಮಾಡಿದ ಅದೇ ದಿನ ಸ್ಪೆಕ್ಟ್ರಮ್ ನಿಯೋಜನೆ ಪತ್ರಗಳನ್ನು ನೀಡಿರುವುದು ವಿಶೇಷ ಸಂಗತಿ.

ಇದನ್ನೂ ಓದಿ:ಭಾರತದಲ್ಲಿ ಬಿಡುಗಡೆಗೆ ಸಿದ್ಧವಾದ Redmi Note 11SE : ಇದರ ವೈಶಿಷ್ಟ್ಯಗಳನ್ನು ತಿಳಿಯಿರಿ

ABOUT THE AUTHOR

...view details