ಕರ್ನಾಟಕ

karnataka

ETV Bharat / bharat

ಭಾರತದಲ್ಲಿ 5G ಸೇವೆ ಆರಂಭ: ಅ.1 ರಂದು ಚಾಲನೆ ನೀಡಲಿರುವ ಪ್ರಧಾನಿ ಮೋದಿ - 5G ಸೇವೆಗೆ ಅಧಿಕೃತವಾಗಿ ಚಾಲನೆ

ಅಕ್ಟೋಬರ್ 1 ರಂದು ನವದೆಹಲಿಯಲ್ಲಿ ಆಯೋಜನೆಯಾಗಿರುವ IMC 2022 ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ 5G ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. IMC 2022 ಕಾರ್ಯಕ್ರಮವು ಶನಿವಾರದಿಂದ ಅಕ್ಟೋಬರ್ 4 ರವರೆಗೆ ನಡೆಯಲಿದೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

By

Published : Sep 30, 2022, 4:05 PM IST

Updated : Sep 30, 2022, 4:15 PM IST

ನವದೆಹಲಿ: ಅ.1 ರಂದು ರಾಷ್ಟ್ರ ರಾಜಧಾನಿಯಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಮೊಬೈಲ್ ಕಾಂಗ್ರೆಸ್ (ಐಎಂಸಿ) ಕಾರ್ಯಕ್ರಮದ ವೇಳೆ, ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ. 5ಜಿ ಸೇವೆಯಿಂದ ತಡೆರಹಿತ ಕವರೇಜ್, ಹೆಚ್ಚಿನ ಡೇಟಾ ದರ, ವಿಳಂಬ ಮತ್ತು ಯಾವುದೇ ತೊಂದರೆ ಇಲ್ಲದೇ ಸಂವಹನವನ್ನು ಮಾಡಬಹುದಾಗಿದೆ. ಇದು ಸ್ಪೆಕ್ಟ್ರಮ್ ಮತ್ತು ನೆಟ್‌ವರ್ಕ್ ದಕ್ಷತೆಯನ್ನು ಹೆಚ್ಚಿಸುತ್ತದೆ.

ಈ ನಡುವೆ IMC 2022 ಶನಿವಾರದಿಂದ ಅಕ್ಟೋಬರ್ 4 ರವರೆಗೆ 'ಹೊಸ ಡಿಜಿಟಲ್ ಯೂನಿವರ್ಸ್' ಎಂಬ ವಿಷಯದ ಅಡಿ ನಡೆಯುತ್ತದೆ. "ಇದು ಡಿಜಿಟಲ್ ತಂತ್ರಜ್ಞಾನದ ತ್ವರಿತ ಅಳವಡಿಕೆ ಮತ್ತು ಪ್ರಸಾರದಿಂದ ಆಗುವ ಅನನ್ಯ ಅವಕಾಶಗಳ ಬಗ್ಗೆ ಚರ್ಚಿಸಲು ಚಿಂತಕರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಬರುತ್ತಾರೆ" ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಶ್ವದ ಎರಡನೇ ಅತಿದೊಡ್ಡ ಡಿಜಿಟಲ್ ಸಂಪರ್ಕ ಹೊಂದಿರುವ ದೇಶವಾಗಿರುವ ಭಾರತದ ಈ ಕ್ಷೇತ್ರದಲ್ಲಿ ಸಾಧನೆ ಹೇಗಿದೆ?. ಇದಕ್ಕಾಗಿ ನಮ್ಮ ಭವಿಷ್ಯದ ಯೋಜನೆಗಳೇನು?. ಇಂದು ಭಾರತದ 4G ವೇಗವು ಸರಿಯಾಗಿದೆಯೇ?. ಮೊಬೈಲ್ ಡೌನ್‌ಲೋಡ್ ವೇಗದ ವಿಷಯದಲ್ಲಿ ನಾವು ಜಾಗತಿಕವಾಗಿ 139 ದೇಶಗಳಲ್ಲಿ 118 ನೇ ಸ್ಥಾನವನ್ನು ಹೊಂದಿದ್ದೇವೆ. ಇದು14 Mbps ಆಗಿದ್ದು, ಜಾಗತಿಕ ಸರಾಸರಿ 31.01 Mbpsನ ಅರ್ಧಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ:ಅ.12ರೊಳಗೆ ಬೆಂಗಳೂರು ಸೇರಿ 13 ನಗರಗಳಲ್ಲಿ 5ಜಿ ಸೇವೆ ಆರಂಭಿಸಲಿರುವ ಕೇಂದ್ರ ಸರ್ಕಾರ

ಕಳೆದ 5 ವರ್ಷಗಳಲ್ಲಿ, 4G ಡೇಟಾ ಟ್ರಾಫಿಕ್ 6.5 ಪಟ್ಟು ಹೆಚ್ಚಾಗಿದೆ. ಆದರೆ ಮೊಬೈಲ್ ಬ್ರಾಡ್‌ಬ್ಯಾಂಡ್ ಚಂದಾದಾರರು 2.2 ಪಟ್ಟು ಹೆಚ್ಚಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ 31 ಪ್ರತಿಶತದಷ್ಟು ಸಿಎಜಿಆರ್‌ನೊಂದಿಗೆ ಮೊಬೈಲ್ ಡೇಟಾ ಬಳಕೆ ಪ್ರತಿ ಬಳಕೆದಾರರಿಗೆ ತಿಂಗಳಿಗೆ 17 GB ತಲುಪಿದೆ. ಇಂದು ವಿಡಿಯೋ ಡೌನ್‌ಲೋಡ್‌ಗಳು ಮತ್ತು ಸ್ಟ್ರೀಮಿಂಗ್ ನಮ್ಮ ಡೇಟಾ ಟ್ರಾಫಿಕ್‌ನ ಸುಮಾರು 70 ಪ್ರತಿಶತದಷ್ಟಿದೆ.

ದೇಶದಲ್ಲಿ ಈಗಾಗಲೇ 5G ತರಂಗಾಂತರ ಮಂಜೂರಾತಿ, ಹಂಚಿಕೆ ಸೇರಿದಂತೆ ಎಲ್ಲ ವಿಧಿವಿಧಾನಗಳು ಪೂರ್ಣಗೊಂಡಿದೆ. ದೇಶದಲ್ಲಿ 5G ಸೇವೆ ಆರಂಭವಾಗಬೇಕು ಎಂಬ ದೃಷ್ಟಿಯಲ್ಲಿ ಟೆಲಿಕಾಂ ಇಲಾಖೆಯು ಕಳೆದ ಆಗಸ್ಟ್ 10 ರಂದೇ 5G ಸ್ಪೆಕ್ಟ್ರಮ್‌ಗಳನ್ನು ಹಂಚಿಕೆ ಮಾಡಿದೆ. ದೇಶದಲ್ಲಿ 5G ದೇಶದಾದ್ಯಂತ 5G ಉಪಕರಣಗಳನ್ನು ಸ್ಥಾಪಿಸುವ ಪ್ರಕ್ರಿಯೆಗಾಗಿ ಪ್ರತಿ ಟೆಲಿಕಾಂ ಸಂಸ್ಥೆಯು 30 ರಿಂದ 40 ಸಾವಿರ ಕೋಟಿಯಷ್ಟು ಖರ್ಚು ಮಾಡಬೇಕಾಗಿರುವುದರಿಂದ ದೇಶದಲ್ಲಿ 4G ಸೇವೆಗಿಂತ 5G ಸೇವೆ ಬಳಕೆಯು ದುಬಾರಿಯಾಗಬಹುದು ಎನ್ನಲಾಗಿದೆ.

Last Updated : Sep 30, 2022, 4:15 PM IST

ABOUT THE AUTHOR

...view details