ನವದೆಹಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದರು ಹಾಗೂ ಶಾಸಕರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ)ಯಲ್ಲಿ 56 ಮೊಕದ್ದಮೆಗಳು ದಾಖಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಎರಡು ಕೇಸ್ ಸಹ ಸೇರಿವೆ.
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಂಪಿ ಮತ್ತು ಎಂಎಲ್ಎಗಳ ವಿರುದ್ಧದ ಸಿಬಿಐ ಕೇಸ್ಗಳ ಕುರಿತಾದ ಮಾಹಿತಿಯನ್ನು ಲೋಕಸಭೆಗೆ ನೀಡಿದ್ದು, 2017ರಿಂದ 2022ರ ಅಕ್ಟೋಬರ್ 31ರವರೆಗೆ ದಾಖಲಾದ ಪ್ರಕರಣಗಳ ಮಾಹಿತಿ ಬಹಿರಂಗ ಪಡಿಸಿದೆ. ಒಟ್ಟಾರೆ 56 ಕೇಸ್ಗಳ ಪೈಕಿ ಈಗಾಗಲೇ 22 ಕೇಸ್ಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.