ನವದೆಹಲಿ:ಪ್ಯಾನ್-ಇಂಡಿಯಾ ಸಮೀಕ್ಷೆಯಲ್ಲಿ ಸುಮಾರು ಶೇ 54ರಷ್ಟು ಜನರು ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಕಾನೂನು ಬದ್ಧಗೊಳಿಸುವುದಕ್ಕೆ ಒಲವು ತೋರತ್ತಿಲ್ಲ. ಅದರ ಬದಲಿಗೆ ಡಿಜಿಟಲ್ ಆಸ್ತಿಗಳೆಂದು ಪರಿಗಣಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ವರದಿಯೊಂದು ಬಹಿರಂಗ ಪಡಿಸಿದೆ.
ಈ ಸರ್ವೇಯು ದೇಶದ 342 ಜಿಲ್ಲೆಗಳಲ್ಲಿ ವಾಸಿಸುವ ಜನರಿಂದ 56,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ ಎಂದು ಸ್ಥಳೀಯ ವಲಯಗಳು ತಿಳಿಸಿವೆ. ಆದರೆ, ವೈಯಕ್ತಿಕ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳ ಸಂಖ್ಯೆಯು ಭಿನ್ನವಾಗಿದೆ ಎಂಬುದು ಗಮನಾರ್ಹ. ನಿಯಂತ್ರಕ ದೃಷ್ಟಿಕೋನದಿಂದ ಭಾರತವು ಕ್ರಿಪ್ಟೋಕರೆನ್ಸಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ 8,717 ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ ಎಂದು ಲೋಕಲ್ಸರ್ಕಲ್ಸ್ ವರದಿಯಲ್ಲಿ ತಿಳಿಸಲಾಗಿದೆ.
ಕ್ರಿಪ್ಟೋ ಕಾನೂನು ಬದ್ಧಕ್ಕೆ ಶೇ 26 ರಷ್ಟು ಜನರ ಒಲವು
26 ಪ್ರತಿಶತ ಜನರು ಈ ಕರೆನ್ಸಿಗಳನ್ನು ಕಾನೂನು ಬದ್ಧಗೊಳಿಸಬೇಕು ಮತ್ತು ಭಾರತದಲ್ಲಿ ಅವಕ್ಕೆ ತೆರಿಗೆ ವಿಧಿಸಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಶೇಕಡಾ 54 ರಷ್ಟು ಜನರು ಅದನ್ನು ಕಾನೂನುಬದ್ಧಗೊಳಿಸಬಾರದು ಎಂದರೆ, ಶೇಕಡಾ 20 ರಷ್ಟು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಇತ್ತೀಚಿನ T-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೂರರಲ್ಲಿ ಒಂದು ಜಾಹೀರಾತು ಕ್ರಿಪ್ಟೋಕರೆನ್ಸಿಗಳಾಗಿದ್ದು, ವೇದಿಕೆಗಳು ಮತ್ತು ವಿನಿಮಯ ಕೇಂದ್ರಗಳು ವೀಕ್ಷಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ ಎಂದು ವರದಿ ಹೇಳಿದೆ. ಕೆಲವು ವಿನಾಯಿತಿಗಳೊಂದಿಗೆ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸಲು ಸರ್ಕಾರವು ಸನ್ನದ್ಧವಾಗಿದ್ದು, ಮಸೂದೆ ಮಂಡನೆ ಮಾಡಲು ಅಸ್ತು ಎಂದಿದೆ.
ನವೆಂಬರ್ 29 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ, 2021', ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರೂಪಿಸಲು ಸನ್ನದ್ಧವಾಗಿದೆ.
ಮಸೂದೆಯು ಭಾರತದಲ್ಲಿ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ. ಆದ್ರೆ ಕ್ರಿಪ್ಟೋಕರೆನ್ಸಿ ಮತ್ತು ಅದರ ಬಳಕೆಗಳ ಆಧಾರವಾಗಿರುವ ತಂತ್ರಜ್ಞಾನವನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಈ ಮಸೂದೆ ಅನುಮತಿಸಲಿದೆ.