ಮುಂಬೈ:ಮಹಾಮಾರಿ ಕೊರೊನಾ ವೈರಸ್ ಅಲೆ ಮಹಾರಾಷ್ಟ್ರದಲ್ಲಿ ಜೋರಾಗಿದ್ದು, ನಿತ್ಯ ನೂರಾರು ಜನರು ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಮಧ್ಯೆ ವೈದ್ಯೆಯೊಬ್ಬರು ಡೆಡ್ಲಿ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ 51 ವರ್ಷದ ಡಾ. ಮನಿಷಾ ಜಾಧವ್ ಇದೀಗ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು, ಅವರು ನಗರದ ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
"ಬಹುಶ: ಇದು ನನ್ನ ಲಾಸ್ಟ್ ಗುಡ್ ಮಾರ್ನಿಂಗ್": ಪೋಸ್ಟ್ ಮಾಡಿದ ಕೆಲ ಗಂಟೆಗಳಲ್ಲಿ ಕೋವಿಡ್ನಿಂದ ವೈದ್ಯೆ ಸಾವು!
ಕೋವಿಡ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೈದ್ಯೆಯೊಬ್ಬರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದು, ಸಾವನ್ನಪ್ಪುವುದಕ್ಕೂ ಕೆಲ ಗಂಟೆಗಳ ಮೊದಲು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಸಾವನ್ನಪ್ಪುವುದಕ್ಕೂ ಕೆಲ ಗಂಟೆಗಳ ಮುಂಚಿತವಾಗಿ ಟ್ವೀಟ್ ಮಾಡಿರುವ ಡಾ. ಮನಿಷಾ, ಬಹುಶಃ ಇದು ನನ್ನ ಲಾಸ್ಟ್ ಗುಡ್ ಮಾರ್ನಿಂಗ್ ಎಂದು ಪೋಸ್ಟ್ ಮಾಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅವರು ನಿಧನರಾಗಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ತೀವ್ರವಾಗಿ ಹಬ್ಬುತ್ತಿರುವ ಕಾರಣ ಅನೇಕ ವೈದ್ಯರು, ವೈದ್ಯಕೀಯ ಸಿಬ್ಬಂದಿ ಈ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ತಮಗೆ ಆದ ನೋವಿನ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ.
ಡೆಡ್ಲಿ ವೈರಸ್ ಬಗ್ಗೆ ಆತಂಕಗೊಂಡಿರುವ ಮುಂಬೈ ವೈದ್ಯೆ ಡಾ. ತೃಪ್ತಿ ಗಿಲಾಡಾ ವಿಡಿಯೋ ಸಂದೇಶ ರವಾನೆ ಮಾಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ನಾವು ಅಸಹಾಯಕರಾಗಿದ್ದೇವೆ. ಇಂತಹ ಪರಿಸ್ಥಿತಿ ಈ ಹಿಂದೆ ನಾನು ನೋಡಿಲ್ಲ. ಜನರು ಭಯಭೀತರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.