ಅಯೋಧ್ಯೆ (ಉತ್ತರ ಪ್ರದೇಶ): ಇದೇ ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆಗೆ ಅಯೋಧ್ಯೆ ಸಜ್ಜಾಗುತ್ತಿದ್ದು, ಐದು ವರ್ಷದ ರಾಮ ಲಲ್ಲಾನನ್ನು ಪ್ರತಿಬಿಂಬಿಸುವ 51 ಇಂಚು ಎತ್ತರದ ರಾಮನ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಲಾಗಿದೆ.
ಮೈಸೂರಿನ ಶಿಲ್ಪಿಯ ಮೂರ್ತಿ ಆಯ್ಕೆ?:ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ''ಭಗವಾನ್ ರಾಮ ಲಲ್ಲಾನ ವಿಗ್ರಹದ ಆಯ್ಕೆಗಾಗಿ ಈ ಹಿಂದೆ ಟ್ರಸ್ಟ್‌ನ ಸಭೆ ನಡೆಸಲಾಗಿತ್ತು. ಭವ್ಯ ದೇವಾಲಯದ ಗರ್ಭಗುಡಿಯೊಳಗೆ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಮೂವರು ಶಿಲ್ಪಿಗಳು ಸ್ಪರ್ಧೆಯಲ್ಲಿದ್ದರು. 5 ವರ್ಷದ ಬಾಲ ರಾಮನ ರೂಪದಲ್ಲಿ ಭಗವಾನ್ ರಾಮನ ಅದ್ಭುತವಾಗಿ ರಚಿಸಲಾದ 51 ಇಂಚು ಎತ್ತರದ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
''ರಾಮನ ವಿಗ್ರಹದ ಕಣ್ಣುಗಳನ್ನು ಕಮಲದ ದಳಗಳನ್ನು ಹೋಲುತ್ತವೆ. ಬಾಲ ರಾಮ ಮುಖವು ಚಂದ್ರನಂತೆ ಹೊಳೆಯುತ್ತದೆ. ತುಟಿಗಳ ಮೇಲೆ ಪ್ರಶಾಂತವಾದ ನಗುವಿದೆ. ಬಾಲ ರಾಮ ಉದ್ದನೆಯ ತೋಳುಗಳು ಗಮನ ಸೆಳೆಯುತ್ತದೆ. ರಾಮ ಲಲ್ಲಾ ಮೂರ್ತಿಯು ಒಂದು ಅಂತರ್ಗತ ದೈವಿಕ ಪ್ರಶಾಂತತೆಯ ನೋಟವನ್ನು ಹೊಂದಿದೆ. ಅತ್ಯಾಕರ್ಷಕವಾಗಿ ಕೆತ್ತಲಾದ ವಿಗ್ರಹದಲ್ಲಿ ರಾಜ ದಶರಥನ ಪುತ್ರ ಹಾಗೂ ವಿಷ್ಣುವಿನ ಅವತಾರವನ್ನು ನೋಡಬಹುದು. ರಾಮನ ಮಂದಿರದ ಗರ್ಭಗುಡಿಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ವಿಗ್ರಹವನ್ನು ಪ್ರತಿಷ್ಠಾಪಿಸುವ ದೇವಾಲಯದ ಭಾಗ ಸಿದ್ಧವಾಗಿದೆ ಎಂದು ಚಂಪತ್ ರೈ ಮಾಹಿತಿ ನೀಡಿದ್ದಾರೆ.