ಜೈಪುರ (ರಾಜಸ್ಥಾನ): ರಾಜಸ್ಥಾನ ಸರ್ಕಾರವು ರಾಜ್ಯದ ಮದರಸಾಗಳಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದೆ. ಅಲ್ಲಿ ಉತ್ತಮ ಶಿಕ್ಷಣ ನೀಡುವುದಕ್ಕಾಗಿ ಸ್ಮಾರ್ಟ್ ಕ್ಲಾಸ್ ರೂಂಗಳಂತಹ ವಿವಿಧ ವ್ಯವಸ್ಥೆಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 13.10 ಕೋಟಿ ರೂಪಾಯಿಗಳ ಹೆಚ್ಚುವರಿ ಬಜೆಟ್‌ಗೆ ಒಪ್ಪಿಗೆ ನೀಡಿದ್ದಾರೆ.
500 ಮದರಸಾಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ: ರಾಜಸ್ಥಾನ ಮದರಸಾ ಮಂಡಳಿಯಲ್ಲಿ ನೋಂದಣಿಯಾಗಿರುವ ಮದರಸಾಗಳ ಪೈಕಿ 500 ಮದರಸಾಗಳಿಗೆ ಈ ಸೌಲಭ್ಯ ಸಿಗಲಿದೆ. ಸ್ಮಾರ್ಟ್ ಕ್ಲಾಸ್ ಕೊಠಡಿಗಳನ್ನು ಸ್ಥಾಪಿಸಲು ಪ್ರತಿ ಮದರಸಾಕ್ಕೆ 2.62 ಲಕ್ಷ ರೂ. ವಿತರಿಸಲಾಗುತ್ತದೆ.
ಗೆಹ್ಲೋಟ್ ಅವರು 2022-23ರ ಬಜೆಟ್‌ನಲ್ಲಿ ನೋಂದಾಯಿತ ಮದರಸಾಗಳಿಗೆ ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಇಂಟರ್ನೆಟ್ ಸೌಲಭ್ಯವನ್ನು ಹಂತ ಹಂತವಾಗಿ ಒದಗಿಸುವುದಾಗಿ ಘೋಷಿಸಿದ್ದರು. ಇದರಡಿಯಲ್ಲಿ ಮುಂಬರುವ ವರ್ಷದಲ್ಲಿ ಮೊದಲ ಹಂತದಲ್ಲಿ ಸುಮಾರು 500 ಮದರಸಾಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದ್ದಾರೆ.
334 ವಸತಿ ಶಾಲೆಗಳಲ್ಲಿ ಡಿಜಿಟಲ್ ಲೈಬ್ರರಿ:ಅದೇ ರೀತಿ, ಹಣಕಾಸು ಮತ್ತು ಧನಸಹಾಯ ಮಸೂದೆ 2022-23 ರ ಚರ್ಚೆಯ ಸಂದರ್ಭದಲ್ಲಿ ರಾಜ್ಯದ ವಸತಿ ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯಗಳು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಹೆಚ್ಚಿಸುವುದಾಗಿ ಸಿಎಂ ಘೋಷಿಸಿದ್ದರು. ಇದರಡಿ ಒಟ್ಟು 334 ವಸತಿ ಶಾಲೆಗಳಲ್ಲಿ ಡಿಜಿಟಲ್ ಲೈಬ್ರರಿಗೆ 36.56 ಕೋಟಿ ರೂ.ಗಳ ಆರ್ಥಿಕ ಅನುಮೋದನೆ ನೀಡಿದ್ದಾರೆ.
ಇದನ್ನೂ ಓದಿ:ಅತ್ಯಾಚಾರ ಸಂತ್ರಸ್ತ ವಿದ್ಯಾರ್ಥಿನಿಯ ಚಿಕಿತ್ಸೆಗೆ 6 ಲಕ್ಷ ರೂ ಸಂಗ್ರಹಿಸಿದ ಪೊಲೀಸರು