ರಂಗಾರೆಡ್ಡಿ:ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೊಂಡಾಪುರದಲ್ಲಿರುವ ಏರಿಯಾ ಆಸ್ಪತ್ರೆಯಿಂದ ಕೋವಿಶೀಲ್ಡ್ ಲಸಿಕೆಯ 50 ಬಾಟಲಿಗಳು ಕಾಣೆಯಾಗಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಆರೋಗ್ಯಾಧಿಕಾರಿ ನಿರ್ದೇಶಕಿ ಸ್ವರಾಜ್ಯ ಲಕ್ಷ್ಮಿ, ಲಸಿಕೆಯ ವಯಲ್ಸ್ಗಳು ಕಾಣೆಯಾಗಿರುವುದು ಗುರುವಾರ ತಿಳಿದು ಬಂದಿದೆ. ಅಂದಿನಿಂದಲೂ ಹುಡುಕಲಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.