ನವದೆಹಲಿ: ಮಂಡಲ್ ಆಯೋಗದ ಪ್ರಕರಣದಲ್ಲಿ 1992 ರಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠದಿಂದ ನಿಗದಿಪಡಿಸಲಾದ ಮೀಸಲಾತಿಯ ಶೇಕಡಾ 50 ರಷ್ಟು ಮೀಸಲಾತಿ ಮಿತಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಮಾತ್ರ ಅನ್ವಯಿಸುತ್ತದೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ನೀಡಿರುವ ಶೇ 10 ರಷ್ಟು ಮೀಸಲಾತಿ ಈ ಮಿತಿಯನ್ನು ಮೀರಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಆರ್ಥಿಕ ದುರ್ಬಲ ವರ್ಗಕ್ಕೆ ಮೀಸಲಾತಿ ಕಾಯ್ದೆಯ ಸಿಂಧುತ್ವವನ್ನು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ಎಂ. ತ್ರಿವೇದಿ ಮತ್ತು ಜೆ.ಬಿ. ಪರ್ದಿವಾಲಾ ಎತ್ತಿ ಹಿಡಿದಿದ್ದಾರೆ. ಆದರೆ, ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರು ವಿಭಿನ್ನ ರೀತಿಯ ಮಾನದಂಡಗಳನ್ನು ರಚಿಸುವ ಮೂಲಕ ತಿದ್ದುಪಡಿಗಳನ್ನು ನಡೆಸಿದರು. ಇದು ಮತ್ತಷ್ಟು ಮೀಸಲಾತಿ ವಿಭಾಗೀಕರಣಕ್ಕೆ ಕಾರಣವಾಗುತ್ತದೆ ಎಂದು ಅವರು ವಾದ ಮಂಡಿಸಿದರು.
ಮೀಸಲಾತಿ ಕುರಿತು ವಿಭಿನ್ನ ಮಾನದಂಡಗಳನ್ನು ಸೃಷ್ಟಿಸುವ ಮುನ್ನ ಸಾಕಷ್ಟು ತಿದ್ದುಡಿಗಳನ್ನು ಒಮ್ಮೆ ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಬಹುದು. ಈಗಾಗಲೇ ಇಂದಿರಾ ಸಾಹ್ನಿ ವಿಧಿ 15 (4) ಮತ್ತು 16 (4)ರಲ್ಲಿ ಮೀಸಲಾತಿಗೆ ಸೀಮಿತಗೊಳಿಸಲಾಗಿದೆ. ಈ ಮೀಸಲಾತಿಯ ತಾರ್ಕಿಕತೆಯ ಮೂಲಕ ಶೇಕಡಾ 50 ರಷ್ಟು ನಿಯಮದ ಉಲ್ಲಂಘನೆಯನ್ನು ಅನುಮತಿಸುವುದು ಮುಂದಿನ ಅನೇಕ ತಿದ್ದುಪಡಿಗಳ ಉಲ್ಲಂಘನೆಗೆ ಕಾರಣವಾಗುತ್ತದೆ. ಅಲ್ಲದೇ, ಇದು ಮೀಸಲಾತಿ ವಿಭಾಗೀಕರಣಕ್ಕೆ ಕಾರಣವಾಗುತ್ತದೆ. ಮೀಸಲಾತಿಯ ನಿಯಮವನ್ನು ಸಮಾನತೆಯ ನಿಯಮವಾಗಿ ವ್ಯವಹರಿಸಬಹುದು ಅಥವಾ ಸಮಾನತೆಯ ಹಕ್ಕನ್ನು ನಂತರ ಸುಲಭವಾಗಿ ಮೀಸಲಾತಿಯ ಹಕ್ಕಿಗೆ ಇಳಿಸಬಹುದು ಎಂದು ನ್ಯಾಯಾಧೀಶರಾದ ಭಟ್ ತಿಳಿಸಿದರು.
ಮುಂದುವರೆದು ತಿಳಿಸಿದ ಅವರು, ಈ ಮೀಸಲಾತಿಯನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ಮೀಸಲಾತಿಗಳನ್ನು ತಾತ್ಕಾಲಿಕ ಮತ್ತು ಅಸಾಧಾರಣವಾಗಿ ನೋಡಬೇಕು, ಇಲ್ಲದಿದ್ದರೆ ಈ ಮೀಸಲಾತಿ ನಿಯಮವನ್ನು ಸಮಾನತೆಯ ನಿಯಮಗಳ ಅನುಸಾರ ಬಳಸುವ ಸಾಧ್ಯತೆ ಇದೆ ಎಂದರು.
ಶೇ 50ರಷ್ಟು ಮೀಸಲಾತಿಯ ನಿರ್ದಿಷ್ಟ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆ ಕಾಣುತ್ತಿಲ್ಲ. ಇದು ಮೂಲಭೂತ ವಿನ್ಯಾಸವಾಗಿದೆ. ಮೀಸಲಾತಿಯನ್ನು ಎತ್ತಿಹಿಡಿಯುವ ಪರಿಣಾಮವಾಗಿ, 50 ಪ್ರತಿಶತ ಮಿತಿಯನ್ನು ಉಲ್ಲಂಘಿಸುವ ಪ್ರಕರಣ ಎಚ್ಚರಿಕೆಯ ಸೂಚನೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.