ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸಬೇಕಿದ್ದ ನ್ಯಾಯಪೀಠವು 11.30ಕ್ಕೆ ನಡೆಸಲಿದೆ. ಹಾಗೆಯೇ ಬೆಳಗ್ಗೆ 11 ಗಂಟೆಗೆ ಅರ್ಜಿ ವಿಚಾರಣೆಗೆ ಕುಳಿತುಕೊಳ್ಳಬೇಕಿದ್ದ ನ್ಯಾಯಾಧೀಶರು 12 ಗಂಟೆಗೆ ನಡೆಸಲಿದ್ದಾರೆ ಎಂದು ಕೋರ್ಟ್‌ನ ಡಿಇಯು ವಿಭಾಗದ ಹೆಚ್ಚುವರಿ ರಿಜಿಸ್ಟ್ರಾರ್ ಪ್ರಕಟಣೆ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್ನ ಶೇ.50ರಷ್ಟು ಸಿಬ್ಬಂದಿಗೆ ಕೊರೊನಾ ಸೋಂಕು
09:39 April 12
ಅರ್ಜಿ ವಿಚಾರಣೆಯ ಸಮಯ ಬದಲಾವಣೆ
09:14 April 12
ಸುಪ್ರೀಂಕೋರ್ಟ್ನ ಶೇ.50ರಷ್ಟು ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದು, ನ್ಯಾಯಾಧೀಶರು ತಮ್ಮ ನಿವಾಸದಿಂದಲೇ ವರ್ಚುವಲ್ ವಿಚಾರಣೆ ನಡೆಸಲಿದ್ದಾರೆ.
ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು ಇದೀಗ ಸರ್ವೋಚ್ಚ ನ್ಯಾಯಾಲಯ ಕೂಡ ಸೋಂಕಿನ ಸುಳಿಯಲ್ಲಿ ಸಿಲುಕಿದೆ.
ಸುಪ್ರೀಂಕೋರ್ಟ್ನ ಶೇ.50ರಷ್ಟು ಸಿಬ್ಬಂದಿಗೆ ವೈರಸ್ ಅಂಟಿರುವುದು ದೃಢವಾಗಿರುವುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇಂದಿನ ವಿಚಾರಣೆಗಳನ್ನು ನ್ಯಾಯಾಧೀಶರು ತಮ್ಮ ಮನೆಯಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿದ್ದಾರೆ.
ಮುಂದಿನ ವಿಚಾರಣೆಗಳು ಸಹ ವರ್ಚುವಲ್ ಆಗಿ ನಡೆಯಲಿದೆ ಎಂದು ಹೇಳಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.