ಕೊರೊನಾ ಸೋಂಕು ಆರಂಭವಾದಾಗಿನಿಂದ ಇಲ್ಲಿಯ ತನಕ ಹಲವರು ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದಾರೆ ಎಂದು ವರದಿಯೊಂದರಿಂದ ಬಹಿರಂಗವಾಗಿದೆ. ಜ್ವರ, ಶೀತ, ಮೂಗು ಸೋರುವಿಕೆ, ಆಯಾಸದ ಜೊತೆಗೆ ವಾಸನೆ ಮತ್ತು ರುಚಿಯ ಸಾಮರ್ಥ್ಯ ಕಳೆದುಕೊಳ್ಳುವಿಕೆ ಪ್ರಮುಖ ಕೊರೊನಾ ಸೋಂಕಿನ ಪ್ರಮುಖ ಲಕ್ಷಣಗಳೆಂದು ಹೇಳಲಾಗುತ್ತದೆ. ಹಲವರು ಈ ಸೋಂಕಿಗೆ ತುತ್ತಾಗಿ ಪುನಃ ವಾಸನೆ ಗ್ರಹಿಕೆಯನ್ನು ಪಡೆದುಕೊಂಡರೇ, ಕೆಲವರು ಈಗಲೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ಬಗ್ಗೆ ಸಂಶೋಧನೆ ನಡೆಸಲು ಸ್ಟಾಕ್‌ಹೋಮ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು 2020 ರಲ್ಲಿ ಸೋಂಕಿನ ಮೊದಲ ಅಲೆಯಲ್ಲಿ ಕೋವಿಡ್ ಸೋಂಕಿತ 100 ವ್ಯಕ್ತಿಗಳ ಮೇಲೆ ಪರೀಕ್ಷೆಗಳನ್ನು ನಡೆಸಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಈ ಸಂಶೋಧನೆ ಪ್ರಕಾರ, ಕೋವಿಡ್ನಿಂದ ಚೇತರಿಸಿಕೊಂಡ 18 ತಿಂಗಳ ನಂತರ, 4 ಪ್ರತಿಶತದಷ್ಟು ಜನರು ತಮ್ಮ ವಾಸನೆ ಗ್ರಹಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಾಲುಣಿಸುವ ತಾಯಂದಿರಿಗೆ ಆಹಾರ ಸಲಹೆಗಳು..
ವಾಸನೆ ಗ್ರಹಿಕೆ ಕಳೆದುಕೊಳ್ಳಲು ಕಾರಣ:ನಾಲಿಗೆ ಕಾರ್ಯನಿರ್ವಹಿಸದಿರುವುದು ಆಗಿರಬಹುದು. ಆದರೆ ಇದು ಮೂಗಿಗೆ ಸಹ ಸಂಬಂಧಿಸಿದೆ. ವಾಸ್ತವದಲ್ಲಿ ಕೊರೊನಾ ಸೋಂಕಿನ ನಂತರ ವಾಸನೆ ಶಕ್ತಿ ಹದಗೆಡುತ್ತದೆ ಮತ್ತು ಇದು ನಿಮ್ಮ ರುಚಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕೊರೊನಾ ಸೋಂಕಿನ ಸಮಯದಲ್ಲಿ, ವೈರಸ್ ಮೂಗಿನಲ್ಲಿರುವ ವಾಸನೆಯ ಕೋಶಗಳನ್ನು ನಾಶಪಡಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕೋಶಗಳು ಮತ್ತೆ ರೂಪುಗೊಂಡರೂ, ಅನೇಕ ರೋಗಿಗಳಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ನಂತರ ದೀರ್ಘಕಾಲದವರೆಗೆ ವಾಸನೆ ಗ್ರಹಿಸುವ ಸಾಮರ್ಥ್ಯವು ಹಿಂದಿರುಗುವುದಿಲ್ಲ ಅಥವಾ ಶಾಶ್ವತವಾಗಿ ಕಳೆದುಹೋಗುತ್ತದೆ ಎನ್ನಲಾಗುತ್ತದೆ.