ಗುವಾಹಟಿ :ತಮ್ಮ ಜೊತೆಗೆ 50 ಶಾಸಕರಿದ್ದಾರೆ ಎಂದು ಹೇಳಿರುವ ಏಕನಾಥ್ ಶಿಂಧೆ, ಎಲ್ಲ ಶಾಸಕರೊಂದಿಗೆ ಶೀಘ್ರದಲ್ಲೇ ಮುಂಬೈಗೆ ಹೋಗುವುದಾಗಿ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮೊಂದಿಗಿರುವ ಯಾವ ಶಾಸಕರು ಅವರ ಸಂಪರ್ಕದಲ್ಲಿದ್ದಾರೆಯೋ ಅಂಥವರ ಹೆಸರುಗಳನ್ನು ಬಹಿರಂಗಪಡಿಸಲಿ ಎಂದು ಶಿವಸೇನೆಗೆ ಸವಾಲು ಹಾಕಿದರು.
50 ಶಾಸಕರು ನಮ್ಮೊಂದಿಗಿದ್ದಾರೆ, ಶೀಘ್ರವೇ ಮುಂಬೈಗೆ ಹೋಗ್ತೀವಿ : ಏಕನಾಥ್ ಶಿಂಧೆ - ಗುವಾಹಟಿ ಮಹಾರಾಷ್ಟ್ರ ಶಾಸಕರು
ಬಂಡಾಯ ಶಾಸಕರು ಶಿವಸೇನೆ ಹಾಗೂ ಬಾಳಾಸಾಹೇಬ ಠಾಕ್ರೆ ಅವರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲ ಶಾಸಕರು ತಮ್ಮ ಮುಂದಿನ ದಾರಿ ಏನೆಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ ಎಂದು ಶಿಂಧೆ ಹೇಳಿದರು..

50 MLAs are with us: Eknath Shinde, in Guwahati, Assam
ಬಂಡಾಯ ಶಾಸಕರು ಶಿವಸೇನೆ ಹಾಗೂ ಬಾಳಾಸಾಹೇಬ ಠಾಕ್ರೆ ಅವರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲ ಶಾಸಕರು ತಮ್ಮ ಮುಂದಿನ ದಾರಿ ಏನೆಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ ಎಂದು ಶಿಂಧೆ ಹೇಳಿದರು.
50 ಶಾಸಕರು ನಮ್ಮೊಂದಿಗಿದ್ದಾರೆ, ಶೀಘ್ರವೇ ಮುಂಬೈಗೆ ಹೋಗ್ತೀವಿ : ಏಕನಾಥ್ ಶಿಂಧೆ
ನಮ್ಮ ವಕ್ತಾರ ದೀಪಕ್ ಕೇಸರ್ಕರ್ ನಿಮಗೆ ಎಲ್ಲ ಮಾಹಿತಿ ನೀಡಲಿದ್ದಾರೆ. ನಮ್ಮ ನಿಲುವು, ನಿರ್ಧಾರಗಳ ಬಗ್ಗೆ ಅವರೇ ಹೇಳುತ್ತಾರೆ. ಬಾಳಾಸಾಹೇಬ ಠಾಕ್ರೆಯವರ ಹಿಂದುತ್ವದ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
Last Updated : Jun 28, 2022, 5:31 PM IST