ಚೆನ್ನೈ ( ತಮಿಳುನಾಡು ) :ದುಬೈನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ 50 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಶೇಷ ವಿಮಾನದಲ್ಲಿ ದುಬೈನಿಂದ ಆಗಮಿಸಿದ ಚೆನ್ನೈನ ಶರೂನ್ ರಸೀದ್ (22) ಮತ್ತು ರಾಮನಾಥಪುರಂನ ಮೊಹಮ್ಮದ್ ಮನುವಾಯಿ (35) ಎಂಬುವರನ್ನು ಕಳ್ಳ ಸಾಗಾಣಿಕೆ ಅನುಮಾನದ ಮೇಲೆ ಕಸ್ಟಮ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು.