ಜಬಲ್ಪುರ (ಮಧ್ಯಪ್ರದೇಶ):ಇಲ್ಲಿನ ರೈಲ್ವೆ ಸಂರಕ್ಷಣಾ ಪಡೆ ಪೊಲೀಸರು ಕಾರ್ಯಾಚರಣೆ ಮಾಡಿ ಮಹಿಳೆಯರಿಬ್ಬರು ಸಾಗಿಸುತ್ತಿದ್ದ 50 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ಮಹಿಳೆಯನ್ನ ಬಂಧಿಸಿದ್ದಾರೆ. ಕಾರ್ಯಚರಣೆ ವೇಳೆ ಇನ್ನೋರ್ವ ಮಹಿಳೆ ಪರಾರಿಯಾಗಿದ್ದಾರೆ.
50 ಲಕ್ಷ ರೂ. ನಗದು ತುಂಬಿದ್ದ ಬ್ಯಾಗ್ ಮುಂಬೈ ಕಡೆಗೆ ತೆರಳುತ್ತಿದ್ದ ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ಮಾಹಿತಿ ಮೇರೆಗೆ ಹುಡುಕಾಟ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಮಹಿಳೆಯರು ಹವಾಲ ಹಣದ ಸಾಗಣೆಯಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.