ಕರ್ನಾಟಕ

karnataka

ETV Bharat / bharat

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಸಾವು-ಬದುಕಿನ ಹೋರಾಟದಲ್ಲಿ ಸಂತ್ರಸ್ತೆ - minor raped in Odisha

ತಕ್ಷಣವೇ ಬಾಲಕಿಯನ್ನು ಪುರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಕಟಕ್‌ನಲ್ಲಿರುವ ಎಸ್​ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಹಿಡಿಯಲು ವಿಶೇಷ ತಂಡವನ್ನ ರಚಿಸಿದ್ದಾರೆ..

five year old girl raped in Puri
5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

By

Published : Jan 24, 2022, 1:17 PM IST

ಪುರಿ(ಒಡಿಶಾ) :ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದರಿಂದಾಗಿ ಆಕೆಯು ಚಿಂತಾಜನಕ ಸ್ಥಿತಿಯಲ್ಲಿರುವಘಟನೆ ನಿನ್ನೆ ಬೆಳಗ್ಗೆ ಒಡಿಶಾದ ಪುರಿ ಪಟ್ಟಣದಲ್ಲಿ ನಡೆದಿದೆ.

ಪುರಿಯಲ್ಲಿ ತನ್ನ ಪೋಷಕರೊಂದಿಗೆ ಬಾಲಕಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಆರೋಪಿಯನ್ನು ಮಹೇಶ್ ಮೊಹಂತಿ (35) ಎಂದು ಗುರುತಿಸಲಾಗಿದೆ. ಈತನ ಮನೆಯ ಕೆಲವು ನವೀಕರಣ ಕಾರ್ಯಗಳು ನಡೆಯುತ್ತಿರುವುದರಿಂದ ಸಂತ್ರಸ್ತೆ ಮನೆಯ ಪಕ್ಕದ ಬಾಡಿಗೆ ಮನೆಯಲ್ಲಿ ಕೆಲ ದಿನಗಳವರೆಗೆ ಮಹೇಶ್ ವಾಸವಾಗಿದ್ದ.

ಆರೋಪಿ ತನ್ನ ಸ್ವಂತ ಮನೆಗೆ ತೆರಳಿದ ಮೇಲೂ ಕೂಡ ಅನ್ಯೋನ್ಯವಾಗಿದ್ದ ಈ ಕುಟುಂಬವನ್ನು ಆಗಾಗ ಭೇಟಿ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಕೂಡ ಈತ ಬಂದಾಗ ಬಾಲಕಿ ಮನೆಯ ಹೊರಗೆ ಒಂಟಿಯಾಗಿ ಆಟವಾಡುತ್ತಿರುವುದನ್ನು ಕಂಡಿದ್ದಾನೆ. ಮನೆಯ ಛಾವಣಿ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಈತ ಪರಾರಿಯಾಗುತ್ತಿರುವುದನ್ನು ಕೆಲವರು ನೋಡಿದ್ದಾರೆ.

ಇದನ್ನೂ ಓದಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬಂಧನದ ವೇಳೆ ಅಶ್ಲೀಲ ವಿಡಿಯೋ ನೋಡ್ತಿದ್ದ​ ಆರೋಪಿ!

ತಕ್ಷಣವೇ ಬಾಲಕಿಯನ್ನು ಪುರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಕಟಕ್‌ನಲ್ಲಿರುವ ಎಸ್​ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಹಿಡಿಯಲು ವಿಶೇಷ ತಂಡವನ್ನ ರಚಿಸಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details