ಕರ್ನಾಟಕ

karnataka

ETV Bharat / bharat

Rape Case: 5 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಯುವಕನಿಂದ ಅತ್ಯಾಚಾರ - ಮಹಾರಾಷ್ಟ್ರ ಕ್ರೈಂ ಸುದ್ದಿ

ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದ ನೆರೆ ಮನೆಯ ಯುವಕ ಆಕೆ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ.

Thane Rape Case
Thane Rape Case

By

Published : Nov 16, 2021, 10:21 AM IST

ಥಾಣೆ (ಮಹಾರಾಷ್ಟ್ರ): ನೆರೆ ಮನೆಯ 5 ವರ್ಷದ ಬಾಲಕಿ ಮೇಲೆ 20 ವರ್ಷದ ಯುವಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಥಾಣೆಯ ರಾಮನಗರ ಪ್ರದೇಶದಲ್ಲಿ ನವೆಂಬರ್ 14 ರಂದು ಮನೆಯ ಅಂಗಳದಲ್ಲಿ ಬಾಲಕಿ ಆಟವಾಡುತ್ತಿರುವ ವೇಳೆ ಆಕೆಯನ್ನು ತನ್ನ ಮನೆಗೆ ಕರೆದೊಯ್ದ ಕಾಮುಕ ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಗೆ ಆಕೆಯ ತಾಯ ಸ್ನಾನ ಮಾಡಿಸುವ ವೇಳೆ ವಿಚಾರ ಗೊತ್ತಾಗಿದೆ. ತಕ್ಷಣವೇ ಬಾಲಕಿಯ ತಾಯಿ ಶಾಂತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: 16 ವರ್ಷದ ಅಪ್ರಾಪ್ತ ವಿವಾಹಿತೆಯ ಮೇಲೆ 400ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ!

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿ ಸುಪ್ರಿಯಾ ಜಾಧವ್ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details