ಮೊರೆನಾ(ಮಧ್ಯ ಪ್ರದೇಶ):ಪಕ್ಕದ ಮನೆಯ ವ್ಯಕ್ತಿವೋರ್ವ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಬಾಲಕಿ ಮನೆ ಸಮೀಪದ ಅಂಗಡಿಗೆ ಬ್ರೆಡ್ ಖರೀದಿಗೆಂದು ತೆರಳಿದಾಗ ಪಾಪಿ ಈ ದುಷ್ಕೃತ್ಯ ಎಸಗಿದ್ದಾನೆ.
ಸುಮಾರು ಒಂದೂವರೆ ಗಂಟೆಯಾದರೂ ಬಾಲಕಿ ಮನೆಗೆ ಹಿಂದಿರುಗದ್ದರಿಂದ ಮನೆಯವರು ಹುಡುಕಾಟ ನಡೆಸಿದ್ದರು. ಆದರೂ ಬಾಲಕಿ ಪತ್ತೆಯಾಗಿರಲಿಲ್ಲ. ಕೊನೆಗೆ ಬಾಲಕಿಯ ಮನೆಯವರು ಆಕೆ ತೆರಳಿದ್ದ ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ ಪಕ್ಕದ ಮನೆಯ ವ್ಯಕ್ತಿ ಚೋಟು ತೋಮರ್ ಎಂಬಾತ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ.