ಕರ್ನಾಟಕ

karnataka

ETV Bharat / bharat

30 ವರ್ಷಗಳ ಹಳೆಯ ಕಟ್ಟಡ ಕುಸಿತ.. ಕುಟುಂಬದ ಮೂವರು ಸೇರಿ ನಾಲ್ವರ ದುರ್ಮರಣ - ಮಾನಸ್ ಟವರ್​ ಕುಸಿದು ಬಿದ್ದ ಕಟ್ಟಡ

30 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಹಳೆಯ 5 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಬಿದ್ದು ಮೂವರು ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

5-storey-building-collapses-in-ulhasnagar-3-residents-die
30 ವರ್ಷಗಳ ಹಳೆಯ 5 ಅಂತಸ್ತಿನ ಕಟ್ಟಡ ಕುಸಿದು ಮೂವರು ದುರ್ಮರಣ

By

Published : Sep 22, 2022, 3:53 PM IST

Updated : Sep 22, 2022, 6:01 PM IST

ಥಾಣೆ(ಮಹಾರಾಷ್ಟ್ರ): ಇಲ್ಲಿನ 5 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದುಬಿದ್ದು ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಇಂದು ಸಂಭವಿಸಿದೆ. ಇಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಥಾಣೆಯ ಉಲ್ಲಾಸನಗರದ ಕ್ಯಾಂಪ್ ನಂ.5 ಪ್ರದೇಶದಲ್ಲಿರುವ ಮಾನಸ್ ಟವರ್​ ಕುಸಿದು ಬಿದ್ದ ಕಟ್ಟಡ. ಇದು 5 ಅಂತಸ್ತುಗಳನ್ನು ಹೊಂದಿದ್ದು, 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿ 30 ಫ್ಲಾಟ್​​ಗಳಿವೆ.

ಹಳೆಯದಾಗಿದ್ದ ಕಟ್ಟಡದ 4ನೇ ಅಂತಸ್ತಿನ ಸ್ಲ್ಯಾಬ್​ ಇಂದು ಬೆಳಗ್ಗೆ ಏಕಾಏಕಿ ಉದುರಿದೆ. ಗ್ರೌಂಡ್​ವರೆಗೂ ಇಡೀ ಕಟ್ಟಡ ಕುಸಿದಿದೆ. ಇದರಿಂದ ನೆಲಮಹಡಿಯಲ್ಲಿ ವಾಸವಾಗಿದ್ದ ಕುಟುಂಬದ ಮೂವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಕಟ್ಟಡದ ಮಧ್ಯಭಾಗದಲ್ಲಿ ಈ ದುರಂತ ನಡೆದಿದ್ದು, ಸುರಂಗ ಕೊರೆದಂತೆ ಕಾಣುತ್ತದೆ.

30 ವರ್ಷಗಳ ಹಳೆಯ ಕಟ್ಟಡ ಕುಸಿತ

ವಿಷಯ ತಿಳಿದ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅವಶೇಷಗಳಡಿ ಇನ್ನೂ 4 ರಿಂದ 5 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಗರಪಾಲಿಕೆ, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಯೂ ರಕ್ಷಣೆಗೆ ಧಾವಿಸಿದ್ದಾರೆ.

5 ಅಂತಸ್ತಿನ ಈ ಕಟ್ಟಡವನ್ನು 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಟ್ಟಡ ಹಳೆಯದಾಗಿ, ಬೀಳುವ ಸ್ಥಿತಿಗೆ ಬಂದಿತ್ತು. ಬಿಲ್ಡಿಂಗ್​ ಅಪಾಯಕಾರಿಯಾಗಿದ್ದರಿಂದ ಖಾಲಿ ಮಾಡಲು ಸೂಚಿಸಿ ನಗರಸಭೆ ಇಲ್ಲಿನ ನಿವಾಸಿಗಳಿಗೆ 2 ಬಾರಿ ನೋಟಿಸ್ ನೀಡಿದೆ ಎಂದು ಪುರಸಭೆ ಆಡಳಿತ ತಿಳಿಸಿದೆ.

ಈ ಕಟ್ಟಡ ಅಪಾಯಕಾರಿ ಎಂದು ಪುರಸಭೆ ಆಡಳಿತ ಈಗಾಗಲೇ ಘೋಷಿಸಿತ್ತು. ಹೀಗಾಗಿ ಇಲ್ಲಿ ಹೆಚ್ಚಿನ ಜನರು ಖಾಲಿ ಮಾಡಿದ್ದರು. ಕೆಲ ನಿವಾಸಿಗಳು ಇಲ್ಲಿಯೇ ಉಳಿದುಕೊಂಡಿದ್ದರು ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದರು.

ಓದಿ:ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಅಂಗಾಂಗಗಳ ಕಸಿ ಪ್ರಕ್ರಿಯೆ ಆರಂಭ.. ಹೆಲಿಕಾಪ್ಟರ್​ನಲ್ಲಿ ಬೆಂಗಳೂರಿಗೆ ಹೃದಯ ರವಾನೆ

Last Updated : Sep 22, 2022, 6:01 PM IST

ABOUT THE AUTHOR

...view details