- ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಕಾರ್ಯಕರ್ತರ ವಿಜಯೋತ್ಸವ, ರ‍್ಯಾಲಿಗಳಿಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ
- ಕೋವಿಡ್‌ನಿಂದಾಗಿ ಈ ಹಿಂದೆ ಸಂಭ್ರಮಾಚರಣೆಗೆ ಚುನಾವಣಾ ಆಯೋಗ ನಿಷೇಧ ಹೇರಿತ್ತು. ಸೋಂಕು ಕಡಿಮೆಯಾಗುತ್ತಿರುವುದರಿಂದ ನಿರ್ಬಂಧಗಳನ್ನು ಸಡಿಲಿಕೆ ಮಾಡಿದೆ
ಪಂಚ ತೀರ್ಪು: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್‌ಗೆ ಸೋಲು - ಚುನಾವಣೆ 2022
12:40 March 10
ವಿಜಯೋತ್ಸವಕ್ಕೆ ಇಸಿ ಗ್ರೀನ್ ಸಿಗ್ನಲ್
12:29 March 10
ಗೋವಾ ಸಿಎಂಗೆ ಗೆಲುವು
ಗೋವಾ ಸಿಎಂ ಮತ್ತು ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಸಾಂಕ್ವೆಲಿಮ್‌ನಲ್ಲಿ ಗೆಲುವಿನ ನಗೆ ಬೀರಿದ್ದಾರೆ.
12:27 March 10
ಗೋವಾ ರಾಜ್ಯಪಾಲರ ಭೇಟಿಗೆ ಬಿಜೆಪಿ ನಿರ್ಧಾರ
- ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೇಸರಿ ನಾಯಕರು ರಾಜ್ಯಪಾಲ ಶ್ರೀಧರನ್ ಪಿಳ್ಲೈ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಸರ್ಕಾರ ರಚಿಸಲು ಅವಕಾಶ ಕೋರಿ ಮನವಿ ಪತ್ರ ಸಲ್ಲಿಸಲಿದ್ದಾರೆ
- 40 ಕ್ಷೇತ್ರಗಳ ಗೋವಾದಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 14 ರಲ್ಲಿ ಮುಂಚೂಣಿಯಲ್ಲಿದೆ. 21 ಮ್ಯಾಜಿಕ್ ಸಂಖ್ಯೆಯಾಗಿದೆ
12:17 March 10
ಉತ್ಪಲ್ ಪರಿಕ್ಕರ್‌ಗೆ ಸೋಲು
- ಗೋವಾದ ಪಣಜಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಸೋಲುಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಾಬುಷ್ ಮೊನ್ಸೆರಾಡ್ ವಿರುದ್ಧ 600ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಉತ್ಪಲ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು
12:00 March 10
ಪ್ರಸ್ತುತ 'ಪಂಚ' ಟ್ರೆಂಡ್
ಪ್ರಸ್ತುತ ಪಂಚ ರಾಜ್ಯಗಳ ಚುನಾವಣಾ ಟ್ರೆಂಡ್ ಹೀಗಿದೆ...
ಉತ್ತರ ಪ್ರದೇಶ (403/403) | |||||
---|---|---|---|---|---|
ಬಿಜೆಪಿ+ | ಎಸ್ಪಿ+ | ಬಿಎಸ್‌ಪಿ | ಕಾಂಗ್ರೆಸ್ | ಇತರೆ | |
ಮುನ್ನಡೆ/ಗೆಲುವು | 272 | 120 | 4 | 2 | 5 |
ಪಂಜಾಬ್ (117/117) | |||||
---|---|---|---|---|---|
ಕಾಂಗ್ರೆಸ್ | ಎಎಪಿ | ಎಸ್ಎಡಿ+ | ಬಿಜೆಪಿ+ | ಇತರೆ | |
15 | 89 | 8 | 4 | 1 |
ಉತ್ತರಾಖಂಡ್ (70/70) | ||||
---|---|---|---|---|
ಬಿಜೆಪಿ | ಕಾಂಗ್ರೆಸ್ | ಎಎಪಿ | ಇತರೆ | |
ಮುನ್ನಡೆ/ಗೆಲುವು | 45 | 21 | 0 | 4 |
ಗೋವಾ (40/40) | |||||
---|---|---|---|---|---|
ಬಿಜೆಪಿ | ಕಾಂಗ್ರೆಸ್+ | ಟಿಎಂಸಿ+ | ಎಎಪಿ | ಇತರೆ | |
18 | 13 | 5 | 1 | 3 |
ಮಣಿಪುರ (60/60) | |||||
---|---|---|---|---|---|
ಬಿಜೆಪಿ | ಕಾಂಗ್ರೆಸ್+ | ಎನ್ಪಿಪಿ | ಜೆಡಿಯು | ಇತರೆ | |
25 | 11 | 13 | 3 | 8 |
11:49 March 10
ಮಾಳ್ವಿಕಾ ಸೂದ್‌ಗೆ ಹಿನ್ನಡೆ
- ಪಂಜಾಬ್‌ನ ಮೋಗಾದಲ್ಲಿ ಬಹುಭಾಷಾ ನಟ ಸೋನು ಸೂದ್ ಅವರ ಸಹೋದರಿ ಮಾಳ್ವಿಕಾ ಸೂದ್ ಹಿನ್ನಡೆ ಅನುಭವಿಸಿದ್ದಾರೆ. ಈ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅನ್ನು ಮಣಿಸಿ ಎಎಪಿ ಅಧಿಕಾರಿ ಹಿಡಿಯೋದು ಖಚಿತವಾಗಿದೆ
11:47 March 10
ಉತ್ತರಾಖಂಡ್‌ನಲ್ಲಿ ಬಿಜೆಪಿ 47 ಕ್ಷೇತ್ರಗಳಲ್ಲಿ ಮುನ್ನಡೆ
- ಉತ್ತರಾಖಂಡ್‌ನ 70 ಕ್ಷೇತ್ರಗಳ ಪೈಕಿ 47ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆ ಮೂಲಕ ಸ್ಪಷ್ಟ ಬಹುಮತವನ್ನು ಪಡೆಯುತ್ತ ದಾಪುಗಾಲು ಇಟ್ಟಿದೆ. ಕಾಂಗ್ರೆಸ್ 20ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರೆ ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುಂದಿದ್ದಾರೆ
11:41 March 10
ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಉತ್ಪಲ್
- ಗೋವಾ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಪಣಜಿಯಲ್ಲಿ 800 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದಾರೆ.
- ಪಕ್ಷೇತರನಾಗಿ ಸ್ಪರ್ಧೆಯಲ್ಲಿ ಒಳ್ಳೆಯ ಹೋರಾಟ ಮಾಡಿದ್ದೇನೆ. ಫಲಿತಾಂಶ ಸ್ವಲ್ಪ ಬೇಸರ ತರಿಸಿದೆ. ಮತ ನೀಡಿದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಉತ್ಪಲ್ ಪರಿಕ್ಕರ್ ಹೇಳಿದ್ದಾರೆ
11:33 March 10
ಭಾರಿ ಲಾಭ ಷೇರುಪೇಟೆಯಲ್ಲಿ
- ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದ ಮುಂಬೈ ಷೇರುಪೇಟೆ ಲಾಭದಲ್ಲಿ ಮುಂದುವರಿಕೆ
- ಸೆನ್ಸೆಕ್ಸ್ 1360 ಅಂಕಗಳ ಏರಿಕೆ ಕಂಡು 56,000ಕ್ಕೆ ತಲುಪಿದೆ
- ನಿಫ್ಟಿ 390 ಅಂಕಗಳ ಜಿಗಿತ ಬಳಿಕ 16 ಸಾವಿರದ 730ರಲ್ಲಿ ವಹಿವಾಟು
- ಆಟೋ, ಬ್ಯಾಂಕಿಂಗ್ ವಲಯ ಶೇ.2-3ರಷ್ಟು ಲಾಭ ಗಳಿಸಿದೆ
- ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್ ಶೇ.6ರಷ್ಟು ಲಾಭ ಗಳಿಸಿವೆ
- ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್ ಷೇರುಗಳ ಮೌಲ್ಯ ಹೆಚ್ಚಳ
- ಕೋಲ್ ಇಂಡಿಯಾ, ಹಿಂಡಾಲ್ಕೊ, ಒಎನ್‌ಜಿಸಿ, ಟೆಕ್ ಮಹೀಂದ್ರಾ, ಹೆಚ್‌ಸಿಎಲ್‌ಗೆ ನಷ್ಟ
- ಪಂಜಾಬ್‌ನಲ್ಲಿ ಎಎಪಿ ಹೊರತು ಪಡಿಸಿ ಆಯಾ ರಾಜ್ಯಗಳಲ್ಲಿ ಅಧಿಕಾರ ಬದಲಾವಣೆಯಾಗುವ ನಿರೀಕ್ಷೆ ಇಲ್ಲದ ಕಾರಣ ಷೇರುಪೇಟೆ ಸಕಾರಾತ್ಮಕವಾಗಿ ವಹಿವಾಟು ನಡೆಸುತ್ತಿದೆ. ದೊಡ್ಡ ರಾಜ್ಯವಾದ ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಮಣಿಪುರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಖಚಿತವಾಗಿದೆ. ಗೋವಾದಲ್ಲಿ ಮಾತ್ರ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.
11:24 March 10
ಯುಪಿ ಡಿಸಿಎಂಗೆ 800 ಮತಗಳ ಮುನ್ನಡೆ
- ಉತ್ತರ ಪ್ರದೇಶದ ಸಿರತು ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ 800 ಮತಗಳ ಮುನ್ನಡೆಯಲಿದ್ದಾರೆ. ಎಸ್ಪಿ ಅಭ್ಯರ್ಥಿ ಪಲ್ಲವಿ ಪಟೇಲ್ ಇಲ್ಲಿ ಹಿನ್ನಡೆ ಅನುಭವಿಸಿದ್ದಾರೆ
11:23 March 10
ಮಣಿಪುರ ಸಿಎಂಗೆ ಮುನ್ನಡೆ
ಮಣಿಪುರ ಸಿಎಂ ಬಿರೇನ್ ಸಿಂಗ್ ಹಿಂಗಾಂಗ್ ಮತ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ರಾಜ್ಯದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ
11:02 March 10
ಗೋವಾ ಸಿಎಂಗೆ ಮುನ್ನಡೆ
- ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ 605 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಹಿಂದಿನ ಸುತ್ತಿನಲ್ಲಿ ಸಾವಂತ್ ಹಿನ್ನಡೆ ಅನುಭವಿಸಿದ್ದರು.
10:46 March 10
ರಾಜೀನಾಮೆಗೆ ಮುಂದಾದ ಪಂಜಾಬ್ ಸಿಎಂ ಚನ್ನಿ
- ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿರುವುದರಿಂದ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ. ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ.
10:39 March 10
ಪಂಚ ರಾಜ್ಯಗಳ ಕೌಟಿಂಗ್ ಟ್ರೆಂಡ್...
ಪ್ರಸ್ತುತ ಪಂಚ ರಾಜ್ಯಗಳ ಚುನಾವಣಾ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಪಂಜಾಬ್‌ನಲ್ಲಿ ಆಮ್ ಆದ್ಮಿ ಇದೇ ಮೊದಲ ಬಾರಿ ಬಹುಮತಕ್ಕೆ ಬೇಕಿರುವ ಸಂಖ್ಯೆಯನ್ನು ತಲುಪಿದ್ರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ 2ನೇ ಬಾರಿ ಸರ್ಕಾರ ರಚಿಸುವತ್ತ ದಾಪುಗಾಲು ಇಟ್ಟಿದೆ. ಉತ್ತರಾಖಂಡ್ ಬಿಜೆಪಿ ಪಾಲಾದರೆ, ಗೋವಾದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ.
UTTAR PRADESH (403/403) | |||||
---|---|---|---|---|---|
BJP+ | SP+ | BSP | INC | OTH | |
Lead/won | 245 | 133 | 7 | 3 | 15 |
PUNJAB (117/117) | |||||
---|---|---|---|---|---|
INC | AAP | SAD+ | BJP+ | OTH | |
11 | 90 | 11 | 5 | 0 |
UTTARAKHAND (70/70) | ||||
---|---|---|---|---|
BJP | INC | AAP | OTH | |
Lead/won | 43 | 23 | 0 | 4 |
GOA (40/40) | |||||
---|---|---|---|---|---|
BJP | INC+ | TMC+ | AAP | OTH | |
18 | 14 | 5 | 1 | 2 |
MANIPUR (60/60) | |||||
---|---|---|---|---|---|
BJP | INC+ | NPP | JDU | OTH | |
26 | 13 | 7 | 5 | 9 |
10:14 March 10
ಎರಡಂಕಿ ತಲುಪದ ಕೈ, ಬಿಎಸ್‌ಪಿ
- ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆಯನ್ನು ದಾಟಿದ್ದು, ಪ್ರಸ್ತುತ 229 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 120 ಸ್ಥಾನಗಳಲ್ಲಿ ಎಸ್‌ಪಿ ಮುನ್ನಡೆ ಸಾಧಿಸಿದರೆ, ಬಿಎಸ್‌ಪಿ, ಕಾಂಗ್ರೆಸ್ ಎರಡಂಕಿ ತಲುಪಲು ಸಾಧ್ಯವಾಗಿಲ್ಲ.
10:08 March 10
ಪಂಜಾಬ್‌ನ 77 ಕ್ಷೇತ್ರಗಳಲ್ಲಿ ಎಎಪಿ ಮುನ್ನಡೆ
- ಪಂಜಾಬ್‌ನಲ್ಲಿ ಬಹುಮತಕ್ಕೆ ಬೇಕಿರುವ 59 ಸಂಖ್ಯೆಯನ್ನು ಮೀರಿರುವ ಆಮ್ ಆದ್ಮಿ ಪಕ್ಷ ಪ್ರಸ್ತುತ 77 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 21, ಶಿರೋಮಣಿ ಅಕಾಲಿದಳ 13, ಬಿಜೆಪಿ 5 ಕ್ಷೇತ್ರಗಳ ಮುನ್ನಡೆಯಲ್ಲಿವೆ
09:57 March 10
ಸೆನ್ಸೆಕ್ಸ್ 1160 ಅಂಕಗಳ ಭಾರಿ ಜಿಗಿತ
- ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,160 ಅಂಕಗಳ ಭಾರಿ ಏರಿಕೆ ಕಂಡು 55,828 ರಲ್ಲಿ ಹಾಗೂ ನಿಫ್ಟಿ 342 ಅಂಶಗಳ ಜಿಗಿತದ ಬಳಿಕ 16,687ರಲ್ಲಿ ವಹಿವಾಟು ನಡೆಸುತ್ತಿದೆ.
09:55 March 10
ಎಎಪಿ ಸಿಎಂ ಅಭ್ಯರ್ಥಿ ಮನೆ ಬಳಿ ಸಂಭ್ರಮಾಚರಣೆ
- ಪಂಜಾಬ್‌ನಲ್ಲಿ ಎಎಪಿ ಸಿಎಂ ಅಭ್ಯರ್ಥಿ ನಿವಾಸ ಬಳಿ ಸಂಭ್ರಮಾಚರಣೆ
- ಡೋಲು ಬಾರಿಸಿ, ನೃತ್ಯ ಮಾಡಿ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ
- ಎಎಪಿ ಸಿಎಂ ಅಭ್ಯರ್ಥಿ ಭಗವಾನ್ ಮಾನ್ ಮನೆ ಮುಂದೆ ಕಾರ್ಯಕರ್ತರ ಸಂತಸ
09:47 March 10
ಪಂಜಾಬ್‌ನಲ್ಲಿ ಮ್ಯಾಜಿಕ್ ನಂಬರ್ ತಲುಪಿದ ಎಎಪಿ
- ಅಮೃತ್‌ಸರ ಪೂರ್ವ ಕ್ಷೇತ್ರದಲ್ಲಿ ನವಜೋತ್ ಸಿಂಗ್ ಸಿಧುಗೆ ಹಿನ್ನಡೆ
- ನವಜೋತ್ ಸಿಂಗ್ ಸಿಧು, ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ
- ಪಂಜಾಬ್‌ನಲ್ಲಿ ಬಹುಮತಕ್ಕೆ ಬೇಕಿರುವ ಸ್ಥಾನ ತಲುಪಿದ ಎಎಪಿ
- ಪಂಜಾಬ್ ಸಿಎಂ ಚನ್ನಿ, ಮಾಜಿ ಸಿಎಂ ಅಮರೀಂದರ್ ಸಿಂಗ್‌ಗೆ ಹಿನ್ನಡೆ
09:40 March 10
ಪಂಜಾಬ್ ಸಿಎಂಗೆ ಹಿನ್ನಡೆ
- ಚಮ್ಕೌರ್ ಸಾಹಿಬ್‌ನಲ್ಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಹಿನ್ನಡೆ ಅನುಭವಿಸಿದ್ದಾರೆ
09:40 March 10
ಉತ್ತರಾಖಂಡ್ ಸಿಎಂಗೆ ಮುನ್ನಡೆ
- ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಖತಿಮಾದಲ್ಲಿ ಮುನ್ನಡೆ ಸಾಧಿಸಿದ್ದಾರೆ
09:31 March 10
ಪಂಜಾಬ್‌ನಲ್ಲಿ ಎಎಪಿಗೆ ಭಾರಿ ಮುನ್ನಡೆ
- ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಪಂಜಾಬ್‌ನಲ್ಲಿ ಎಎಪಿ 64 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪಂಜಾಬ್‌ನಲ್ಲಿ ಸರ್ಕಾರ ರಚನೆಗೆ 59 ಮ್ಯಾಜಿಕ್ ಸಂಖ್ಯೆಯಾಗಿದೆ.
09:24 March 10
ಗೃಹ ಸಚಿವಾಲಯದಿಂದ ಅಲರ್ಟ್
- ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಜಾಗರೂಕರಾಗಿರಲು ಕೇಂದ್ರ ಏಜೆನ್ಸಿಗಳಿಗೆ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ
09:20 March 10
ಗೋವಾ ಸಿಎಂಗೆ ಹಿನ್ನಡೆ
- ಗೋವಾ ಸಿಎಂ ಪ್ರಮೋದ್ ಸಾವಂತ್‌ಗೆ 400 ಮತಗಳ ಹಿನ್ನಡೆ
- ಚಮ್ಕೌರ್ ಸಾಹಿಬ್‌ನಿಂದ ಪಂಜಾಬ್ ಸಿಎಂ ಚನ್ನಿಗೆ ಮುನ್ನಡೆ
- 2017ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು
09:09 March 10
ಉತ್ಪಲ್ ಪರಿಕ್ಕರ್‌ಗೆ ಮುನ್ನಡೆ
- ಗೋವಾದಲ್ಲಿ ಉತ್ಪಲ್ ಪರಿಕ್ಕರ್‌ಗೆ ಮುನ್ನಡೆ
- ಉತ್ಪಲ್, ಗೋವಾ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ
09:03 March 10
3 ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮ ಬಲದ ಪೈಪೋಟಿ
- ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಗೆ ಮುನ್ನಡೆ
- ಪಂಜಾಬ್‌ನ ಅಧಿಕ ಸ್ಥಾನಗಳ ಮುಂಚೂಣಿಯಲ್ಲಿ ಕಾಂಗ್ರೆಸ್
- ಉತ್ತರಾಖಂಡ್, ಗೋವಾ, ಮಣಿಪುರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ
08:58 March 10
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುನ್ನಡೆ
- ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಮುನ್ನಡೆ
- ಜಶ್ವಂತ್ ನಗರದಲ್ಲಿ ಶಿವಪಾಲ್ ಯಾದವ್ ಮುಂಚೂಣಿಯಲ್ಲಿ
- ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಮೈನ್‌ಪುರಿಯಲ್ಲಿ ಮುನ್ನಡೆ
- ಅಮೃತಸರ ಪೂರ್ವ ಕ್ಷೇತ್ರದಲ್ಲಿ ಸಿಎಲ್‌ಪಿ ನಾಯಕ ನವಜೋತ್ ಸಿಂಗ್ ಸಿಧುಗೆ ಮುನ್ನಡೆ
- ಪಟಿಯಾಲಾ ಕ್ಷೇತ್ರದಲ್ಲಿ ಮಾಜಿ ಸಿಎಂ ಅಮರೀಂದರ್ ಸಿಂಗ್‌ಗೆ ಹಿನ್ನಡೆ
08:38 March 10
ಸಿಎಂ ಅಭ್ಯರ್ಥಿ ಮನೆಯಲ್ಲಿ ಜಿಲೇಬಿ ತಯಾರಿ
- ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಸಿದ್ಧತೆ
- ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆ ಹೂಗಳಿಂದ ಅಲಂಕಾರ
- ಭಗವಂತ್ ಮಾನ್ ಮನೆಯಲ್ಲಿ ಜಿಲೇಬಿ ತಯಾರಿ
08:28 March 10
ಪಂಜಾಬ್ದಲ್ಲಿ ಕಾಂಗ್ರೆಸ್ಗೆ ಆರಂಭಿಕ ಮುನ್ನಡೆ
- ಪಂಜಾಬ್‌ನಲ್ಲಿ ಕಾಂಗ್ರೆಸ್ಗೆ ಆರಂಭಿಕ ಮುನ್ನಡೆ ಸಿಕ್ಕಿದೆ
- ಉತ್ತರಾಖಂಡ್ದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆದಿದೆ.
- ಉತ್ತರಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆ ಪಡೆದುಕೊಂಡಿದೆ
- ಮಣಿಪುರದಲ್ಲಿ ಫಲಿತಾಂಶ ಹೊರ ಬೀಳುತ್ತಿದೆ
- ಗೋವಾದಲ್ಲಿ ಬಿಜೆಪಿ- ಎಎಪಿ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ
08:21 March 10
ಉತ್ತರ ಪ್ರದೇಶದಲ್ಲಿ ಬಿಜೆಪಿ- ಉತ್ತರಾಖಂಡ್ದಲ್ಲಿ ಕಾಂಗ್ರೆಸ್ ಮುನ್ನಡೆ
- ಉತ್ತರಪ್ರದೇಶದಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಪಡೆದಿದೆ
- ಸಮಾಜವಾದಿ ಪಕ್ಷ 14 ಸ್ಥಾನ, ಕಾಂಗ್ರೆಸ್ -1, ಬಿಎಸ್‌ಪಿ ಯಾವುದೇ ಸ್ಥಾನ ಪಡೆದಿಲ್ಲ
- ಉತ್ತರಾಖಂಡದಲ್ಲಿ ಕಾಂಗ್ರೆಸ್ 6 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ
- ಇನ್ನು ಆಡಳಿತಾರೂಢ ಬಿಜೆಪಿ - 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ
Assembly Election Results 2022
UTTAR PRADESH (42/403) | |||||
---|---|---|---|---|---|
BJP+ | SP+ | BSP | INC | OTH | |
Lead/won | 27 | 14 | 0 | 1 | 0 |
PUNJAB (5/117) | |||||
---|---|---|---|---|---|
INC | AAP | SAD+ | BJP+ | OTH | |
3 | 1 | 1 | 0 | 0 |
UTTARAKHAND (12/70) | ||||
---|---|---|---|---|
BJP | INC | AAP | OTH | |
Lead/won | 4 | 8 | 0 | 0 |
GOA (2/40) | |||||
---|---|---|---|---|---|
BJP | INC+ | TMC+ | AAP | OTH | |
1 | 0 | 0 | 1 | 0 |
MANIPUR (1/60) | |||||
---|---|---|---|---|---|
BJP | INC+ | NPP | JDU | OTH | |
1 | 0 | 0 | 0 | 0 |
08:12 March 10
ಯುಪಿಯಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ
Assembly Election Results 2022
UTTAR PRADESH (19/403) | |||||
---|---|---|---|---|---|
BJP+ | SP+ | BSP | INC | OTH | |
Lead/won | 13 | 5 | 0 | 1 | 0 |
PUNJAB (2/117) | |||||
---|---|---|---|---|---|
INC | AAP | SAD+ | BJP+ | OTH | |
1 | 1 | 0 | 0 | 0 |
UTTARAKHAND (9/70) | ||||
---|---|---|---|---|
BJP | INC | AAP | OTH | |
Lead/won | 3 | 6 | 0 | 0 |
GOA (2/40) | |||||
---|---|---|---|---|---|
BJP | INC+ | TMC+ | AAP | OTH | |
1 | 0 | 0 | 1 | 0 |
MANIPUR (1/60) | |||||
---|---|---|---|---|---|
BJP | INC+ | NPP | JDU | OTH | |
1 | 0 | 0 | 0 | 0 |
- ಪಂಜಾಬ್‌ನಲ್ಲಿ ಕಾಂಗ್ರೆಸ್, ಆಪ್‌ಗೆ ತಲಾ 1 ಕ್ಷೇತ್ರಗಳಲ್ಲಿ ಮುನ್ನಡೆ
- ಉತ್ತರ ಪ್ರದೇಶದಲ್ಲಿ ಬಿಜೆಪಿ 13, ಎಸ್‌ಪಿಗೆ 5 ಕ್ಷೇತ್ರಗಳಲ್ಲಿ ಮುನ್ನಡೆ
08:08 March 10
ಮತ ಎಣಿಕೆ ಪಾರದರ್ಶಕ ಪ್ರಕ್ರಿಯೆ
- ಚುನಾವಣೆಯ ಮತ ಎಣಿಕೆ ಪಾರದರ್ಶಕ ಪ್ರಕ್ರಿಯೆ
- ಎಣಿಕೆ ನಡೆಸುವ ಪ್ರಮಾಣಿತ ಕಾರ್ಯಾಚರಣಾ ವಿಧಾನವಿದೆ
- ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟರಿಗೆ ಮತ ಎಣಿಕೆ ಕೇಂದ್ರದ ಒಳಗೆ ಬರಲು ಅವಕಾಶ
- ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿಕೆ
08:00 March 10
ಮತ ಎಣಿಕೆ ಆರಂಭ
- ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ
- ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡುತ್ತಿರುವ ಸಿಬ್ಬಂದಿ
- ಉತ್ತರ ಪ್ರದೇಶದ 75 ಕೇಂದ್ರಗಳಲ್ಲಿ ಎಣಿಕೆ ಪ್ರಕ್ರಿಯೆ ಶುರು
07:46 March 10
ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್ ಗೆಲುವು ಖಚಿತ - ರಾವತ್
- ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ
- 2-3 ಗಂಟೆಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ
- ಉತ್ತರಾಖಂಡ್ ಜನರ ಮೇಲೆ ನನಗೆ ನಂಬಿಕೆ ಇದೆ
- ಕಾಂಗ್ರೆಸ್ 48 ಸ್ಥಾನ ಪಡೆಯುವುದು ಖಚಿತ
- ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್ ವಿಶ್ವಾಸ
07:40 March 10
ಎಎಪಿ ಸಿಎಂ ಅಭ್ಯರ್ಥಿ ಟೆಂಪಲ್ ರನ್
ಪಂಜಾಬ್ ವಿಧಾನಸಭೆ ಚುನಾವಣೆ ಫಲಿತಾಂಶ
- ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಟೆಂಪಲ್ ರನ್
- ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಗುರುದ್ವಾರಗೆ ಭೇಟಿ
- ಸಂಗ್ರೂರ್‌ನಲ್ಲಿರುವ ಗುರುದ್ವಾರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ
- ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ನಡೆದಿದ್ದ ಮತದಾನ
07:28 March 10
ಗೋವಾದಲ್ಲಿ ಯಾರಿಗೆ ಮ್ಯಾಜಿಕ್ ನಂಬರ್ 21?
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತಎಣಿಕೆ
- ಮಣಿಪುರದಲ್ಲಿ ಶೇ.71ರಷ್ಟು ಮತದಾನ ನಡೆದಿತ್ತು
- ಗೋವಾದಲ್ಲೂ ಶೇಕಡಾ 79.61ರಷ್ಟು ಮತದಾನ
- ಗೋವಾದ 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ
- ಸರ್ಕಾರದ ಚುಕ್ಕಾಣಿ ಹಿಡಿಯಲು 21 ಮ್ಯಾಜಿಕ್ ನಂಬರ್
07:12 March 10
ಮತ ಎಣಿಕೆ ಕೇಂದ್ರಗಳಿಗೆ ಅಧಿಕಾರಿಗಳ ಆಗಮನ
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತಎಣಿಕೆ
- ಮತ ಎಣಿಕೆ ಕೇಂದ್ರಗಳಿಗೆ ಅಧಿಕಾರಿಗಳ ಆಗಮನ
- ಕೆಲವೇ ನಿಮಿಷಗಳಲ್ಲಿ ಮತ ಎಣಿಕೆ ಆರಂಭ
- ಸ್ಟ್ರಾಂಗ್ ರೂಮ್‌ಗಳ ಬಳಿ ಬಿಗಿ ಭದ್ರತೆ
07:08 March 10
06:42 March 10
ಯಾರಿಗೆ ಗೆಲುವು..? ಯಾರಾಗ್ತಾರೆ ಕಿಂಗ್ ಮೇಕರ್..
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ
- ಮಧ್ಯಾಹ್ನದ ವೇಳೆಗೆ ಪಂಚ ರಾಜ್ಯಗಳ ಚುನಾವಣೆಯ ಸ್ಪಷ್ಟ ಫಲಿತಾಂಶ ನಿರೀಕ್ಷೆ
- ಒಟ್ಟು 7 ಹಂತಗಳಲ್ಲಿ ನಡೆದಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ
- ಮತ ಎಣಿಕೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಅಧಿಕಾರಿಗಳು
- ಉತ್ತರ ಪ್ರದೇಶ, ಪಂಜಾಬ್, ಮಣಿಪುರ್, ಗೋವಾ, ಉತ್ತರಾಖಂಡ್ ವಿಧಾನಸಭೆ ಚುನಾವಣೆ