ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಮಧ್ಯೆ ದೇಶದಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಇದರಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಬ್ಲ್ಯಾಕ್ ಫಂಗಸ್ಗೆ ಔಷಧ ತಯಾರಿಸಲು ಇದೀಗ ದೇಶದ 5 ಫಾರ್ಮಾಗಳಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಬ್ಲ್ಯಾಕ್ ಫಂಗಸ್ ವಿರುದ್ಧ ಆ್ಯಂಪೊಟೆರಿಸಿನ್-ಬಿ ಬಳಕೆ ಮಾಡಲಾಗ್ತಿದ್ದು, ದೇಶದಲ್ಲಿ ಇದರ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ದೇಶದಲ್ಲಿ ಐದು ಫಾರ್ಮಾ ಕಂಪನಿಗಳಿಗೆ ಔಷಧ ತಯಾರಿಕೆಗೋಸ್ಕರ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಶೇರ್ ಮಾಡಿದ್ದಾರೆ.
ದೇಶದಲ್ಲಿ ಈಗಾಗಲೇ ಆರು ಫಾರ್ಮಾ ಕಂಪನಿಗಳು ಈ ಔಷಧ ತಯಾರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಔಷಧ ಕೊರತೆ ನಿವಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಸಹಾಯಕತೆ: 100 ರೂಪಾಯಿಗೆ ಹಾರಿಹೋಯ್ತು ಮಗನ ಪ್ರಾಣ
ಆ್ಯಂಪೊಟೆರಿಸಿನ್-ಬಿ 6 ಲಕ್ಷ ಬಾಟಲು ಆಮದು ಮಾಡಿಕೊಳ್ಳಲು ಭಾರತೀಯ ಕಂಪನಿಗಳು ಆದೇಶ ನೀಡಿವೆ ಎಂದಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅನೇಕರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಸ್ಟಿರಾಯ್ಡ್ ಬಳಕೆಯಿಂದಾಗಿ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಅಂಶ ಏರಿಕೆಯಾಗುತ್ತಿದ್ದು, ರೋಗನಿರೋಧಕ ಶಕ್ತಿ ಕಡಿಮೆಯಾಗಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಬ್ಲ್ಯಾಕ್ ಫಂಗಸ್ ತೀವ್ರತೆ ಹೆಚ್ಚಾಗಿರುವ ಕಾರಣ ಕೆಲವೊಂದು ರಾಜ್ಯಗಳಲ್ಲಿ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ್ದಾರೆ.