ದಿಬ್ರುಗಢ (ಅಸ್ಸೋಂ) : ಪರೀಕ್ಷೆಯಲ್ಲಿ ಕಳಪೆ ಅಂಕ ಗಳಿಸಿದ್ದಾರೆ ಎಂದು ಪೋಷಕರಿಗೆ ದೂರಿದ ಐದು ತಿಂಗಳ ಗರ್ಭಿಣಿ ಶಿಕ್ಷಕಿಗೆ ವಿದ್ಯಾರ್ಥಿಗಳು ಮನಬಂದಂತೆ ಥಳಿಸಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.
ಕಳೆದ ನ.27ರಂದು ಜಿಲ್ಲೆಯ ಮೋರಾನ್ನ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭ ಶಿಕ್ಷಕಿಯೋರ್ವರು ವಿದ್ಯಾರ್ಥಿಗಳ ಪೋಷಕರಲ್ಲಿ, ಮಕ್ಕಳು ಕಡಿಮೆ ಅಂಕ ಗಳಿಸಿರುವುದಲ್ಲದೆ ಶಾಲಾ ನಿಯಮಗಳನ್ನು ಗಾಳಿಗೆ ತೂರಿ ಶಾಲಾ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ದೂರಿದ್ದಾರೆ. ಬಳಿಕ 3 ಗಂಟೆ ವೇಳೆಗೆ ಶಿಕ್ಷಕಿಯು ತರಗತಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕರೆಯುವಾಗ ಸುಮಾರು 22 ವಿದ್ಯಾರ್ಥಿಗಳ ಗುಂಪು ಗರ್ಭಿಣಿ ಶಿಕ್ಷಕಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿಕ್ಷಕಿ ಅಂಜು ರಾಣಿಯನ್ನು ಸಹ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.