ದಂತೇವಾಡ: ಛತ್ತೀಸ್‌ಗಢದ ಜಗರ್‌ಗುಂಡ ಮತ್ತು ದಂತೇವಾಡ ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಆರ್‌ಪಿಎಫ್‌ನ 231ನೇ ಬೆಟಾಲಿಯನ್ 5 ಕೆಜಿ ತೂಕದ ಟಿಫಿನ್ ಬಾಂಬ್ ವಶಪಡಿಸಿಕೊಂಡಿದೆ.
ಕಮಾಂಡೆಂಟ್ ಸುರೇಂದ್ರ ಸಿಂಗ್ ಅವರ ಸೂಚನೆ ಮೇರೆಗೆ ನಿನ್ನೆ ನಕ್ಸಲ್ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದ ಸೇನೆ ಸ್ಫೋಟಕವನ್ನು ವಶಕ್ಕೆ ಪಡೆದುಕೊಂಡಿದೆ. ಯಾವುದೇ ರೀತಿಯ ಪ್ರಾಣಹಾನಿ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗದ ರೀತಿಯಲ್ಲಿ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.