ಚಮೋಲಿ(ಉತ್ತರಾಖಂಡ) :ಉತ್ತರಾಖಂಡದ ಪಶ್ಚಿಮ ಕುಮಾನ್ ಪ್ರದೇಶದ ತ್ರಿಶೂಲ್ ಪರ್ವತದಲ್ಲಿ ಸಂಭವಿಸಿರುವ ದಿಢೀರ್ ಹಿಮಪಾತದಿಂದಾಗಿ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ. ನೌಕಾಪಡೆಯ 10 ಸಿಬ್ಬಂದಿ ಹಿಮಪಾತದಲ್ಲಿ ಸಿಲುಕಿದ್ದರು. ಇದರಲ್ಲಿ ಐವರ ರಕ್ಷಣೆ ಮಾಡಲಾಗಿದೆ.
ಹಿಮಪಾತ : ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆ
ಈಗಾಗಲೇ ಐವರು ಸಿಬ್ಬಂದಿ ರಕ್ಷಣೆ ಮಾಡಲಾಗಿದೆ. ಉಳಿದ ಐವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಎಸ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿದು ಬಂದಿದೆ..
ಇದಕ್ಕೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆ ಪ್ರಕಟಣೆ ಹೊರಡಿಸಿದೆ. 20 ನೌಕಾಪಡೆ ಸಿಬ್ಬಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡ, ಸೆಪ್ಟೆಂಬರ್ 3ರಂದು ಮುಂಬೈನಿಂದ ದಂಡಯಾತ್ರೆ ಶುರು ಮಾಡಿತ್ತು. ಇದರಲ್ಲಿ 10 ಸಿಬ್ಬಂದಿ ಇಂದು ಬೆಳಗ್ಗೆ ತ್ರಿಶೂಲ್ ಪರ್ವತ ಹತ್ತಲು ಮುಂದಾಗಿದ್ದರು. ಅವರು ಪರ್ವತ ಹತ್ತಲು ಶುರು ಮಾಡಿದ ಕೆಲ ಗಂಟೆಗಳಲ್ಲಿ ಹಿಮಪಾತವಾಗಿರುವ ಕಾರಣ ಈ ಅವಘಡ ಸಂಭವಿಸಿದೆ.
ಈಗಾಗಲೇ ಐವರು ಸಿಬ್ಬಂದಿ ರಕ್ಷಣೆ ಮಾಡಲಾಗಿದೆ. ಉಳಿದ ಐವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಎಸ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿದು ಬಂದಿದೆ.